ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿ ಕಿಮ್ಸ್ ದಾಖಲೆ:137 ಸೋಂಕಿತರಿಗೆ ಯಶಸ್ವಿ ಡಯಾಲಿಸಿಸ್

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಂಜೀವಿನಿ ಎಂದೇ ಖ್ಯಾತಿ ಪಡೆದ ವಾಣಿಜ್ಯನಗರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯು ಕಳೆದ ಬಾರಿ 101 ಕೋವಿಡ್ ಸೋಂಕಿತರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದ ಕಿಮ್ಸ್ ಈಗ ವೈದ್ಯಕೀಯ ಲೋಕದಲ್ಲಿ ಮತ್ತೊಂದು ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಹೌದು...ಜಗತ್ತಿನೇ ತಲ್ಲಣಗೊಳಿಸಿದ ಕೊರೋನಾ ವೈರಸ್ ವಿರುದ್ಧ ಶತಾಯು ಗತಾಯು ಹೋರಾಟ ನಡೆಸುತ್ತಿರುವ ಕಿಮ್ಸ್ ಈಗಾಗಲೇ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಿದ ಕಿಮ್ಸ್ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ 101 ಹೆರಿಗೆ ಯಶಸ್ವಿಗೊಳಿಸಿದ್ದು, ಈಗ ಕೋವಿಡ್ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಡಯಾಲಿಸಿಸ್ ಮಾಡಿದ್ದು,137ಕೋವಿಡ್ ಸೋಂಕಿತರಿಗೆ ಡಯಾಲಿಸಿಸ್ ಮಾಡುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದೆ.

ಕೋವಿಡ್ ದೃಢಪಟ್ಟಿರುವ ವ್ಯಕ್ತಿಗಳಲ್ಲಿ 10-15% ವ್ಯಕ್ತಿಗಳು ಕಿಡ್ನಿ ವೈಪಲ್ಯದಂತಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಡೈಯಾಲಿಸಿಸ್ ಮಾಡುವುದು ಅನಿವಾರ್ಯವಾಗಿದ್ದು,ಕೋವಿಡ್ ಚಿಕಿತ್ಸೆಯೊಂದಿಗೆ 137 ಜನರಿಗೆ ಡಯಾಲಿಸಿಸ್ ಮಾಡುವ ಮೂಲಕ ಮಹತ್ವದ ಕಾರ್ಯ ನಿರ್ವಹಿಸಿದೆ.

ಕಿಮ್ಸ್ ವೈದ್ಯಕೀಯ ಮಂಡಳಿ ಹಾಗೂ ಆಡಳಿತ ವರ್ಗದ ಪರಿಶ್ರಮದಿಂದ ಡಯಾಲಿಸಿಸ್ ಚಿಕಿತ್ಸೆ ಒಳಗಾದ ರೋಗಿಗಳು 100% ಗುಣಮುಖರಾಗಿ ಮನೆಗೆ ತೆರಳಿದ್ದು,ಕಿಮ್ಸ್ ಸಿಬ್ಬಂದಿಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

ಈಗಾಗಲೇ 28 ಅನುದಾನದಲ್ಲಿ ಪ್ರತ್ಯೇಕ ಆಪರೇಷನ್ ಥೇಟರ್ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು,ಕಿಮ್ಸ್ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ಕೃಷ್ಟ ಮಟ್ಟದ ಚಿಕಿತ್ಸೆ ನೀಡಲಿದೆ ಎಂಬುವುದು ವಿಶೇಷವಾಗಿದೆ.

Edited By : Nagesh Gaonkar
Kshetra Samachara

Kshetra Samachara

29/09/2020 12:39 pm

Cinque Terre

26.79 K

Cinque Terre

1

ಸಂಬಂಧಿತ ಸುದ್ದಿ