ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಗಂಗಾವತಿಯ 45 ವರ್ಷದ ಕೋವಿಡ್ ಸೊಂಕಿತ ಮಹಿಳೆಗೆ ಯಶಸ್ವಿಯಾಗಿ ಕರಳು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ನಲ್ಲಿ ನೆರವೇರಿಸಲಾಗಿದೆ. ಇದೊಂದು ವಿಷೇಶ ಪ್ರಕರಣವಾಗಿದೆ. ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಯಿಂದ ಕಿಮ್ಸ್ ರವಾನಿಸಲಾಗಿತ್ತು. ಈ ವೇಳೆ ಮಹಿಳೆಯ ಕೊರೊನ ಪರೀಕ್ಷೆ ನಡೆಸಿದಾಗಿ ಕೋವಿಡ್ ಇರುವುದು ಪತ್ತೆಯಾಗಿತ್ತು. ಮಹಿಳೆಯ ಸಣ್ಣ ಕರುಳಿಗೆ ರಕ್ತ ಸಂಚಾರ ಮಾಡುವ ನರಗಳು ಹಾನಿಯಾಗಿದ್ದು, ಸಣ್ಣ ಕರಳು ಗ್ಯಾಂಗ್ರೀನ್‍ಗೆ ತುತ್ತಾಗಿತ್ತು. ಈ ಸಣ್ಣ ಕರಳಿನ ಭಾಗವನನ್ನು ಕತ್ತರಿಸಿ ತೆಗೆದು ಹಾಕಲಾಗಿದೆ. ಶಸ್ತ್ರ ಚಿಕಿತ್ಸೆಯ ಯಶಸ್ವಿಯಾಗಿದ್ದು ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ.
ಕಿಮ್ಸ್‍ನ ಶಸ್ತ್ರಚಿಕಿತ್ಸಾ ವಿಭಾಗದ ಡಾ.ವಿನಾಯಕ ಬ್ಯಾಟಪ್ಪನವರ ಶಸ್ತ್ರಚಿಕಿತ್ಸೆ ನೆಡೆಸಿದ್ದಾರೆ. ವಿಭಾಗದ ಮುಖ್ಯಸ್ಥ ಡಾ. ಗುರುಶಾಂತಪ್ಪ ಯಲಗಟ್ಟಿ, ಡಾ. ರಮೇಶ್ ಹೊಸಮನಿ, ಡಾ.ವಿಜಯ್ ಕಾಮತ್ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶಸ್ತ್ರ ಚಿಕಿತ್ಸೆಯಲ್ಲಿ ಸಹಾಯಕರಾಗಿ ಪಾಲ್ಗೊಂಡಿದ್ದರು. ಕಿಮ್ಸ್ ನಿರ್ದೇಶಕ ಡಾ. ಡಾ ರಾಮಲಿಂಗಪ್ಪ ಅಂಟರಠಾಣಿ ಶಸ್ತ್ರ ಚಿಕಿತ್ಸಾ ವಿಭಾಗದ ತಂಡವನ್ನು ಅಭಿನಂದಿಸಿದ್ದಾರೆ.
Kshetra Samachara
29/09/2020 04:57 pm