ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹೀಗೆ ಸಾಲಾಗಿ ನಿಂತು ಚೀಟಿ ಮಾಡಿಸುತ್ತಿರುವ ರೋಗಿಗಳ ಸಂಬಂಧಿಕರು, ಮನೆಯವರು. ಬಳಿಯಲ್ಲೇ ಕಾದಿರುವ ನೂರಾರು ರೋಗಿಗಳು. ಈ ಎಲ್ಲ ದೃಶ್ಯಾವಳಿ ಕಂಡು ಬಂದಿದ್ದು ವಾಣಿಜ್ಯ ನಗರಿಯ ಕಿಮ್ಸ್ ಆಸ್ಪತ್ರೆಯಲ್ಲಿ.
ಕೊರೊನಾ ನಂತರ ಕಿಮ್ಸ್‌ಗೆ ಬರುವ ಹೊರರೋಗಿಗಳು ಹಾಗೂ ಒಳರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸದ ಕಾರಣ ರೋಗಿಗಳು ಸರತಿ ಸಾಲಿನಲ್ಲಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಒಳ ಮತ್ತು ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ. 20ರಿಂದ ಶೇ. 30ರಷ್ಟು ಹೆಚ್ಚಾಗಿದೆ. ಈ ಹಿಂದೆ ಕಿಮ್ಸ್‌ಗೆ ಬರುವ ಹೊರರೋಗಿಗಳ ಸಂಖ್ಯೆ ನಿತ್ಯ 1,500 ರಿಂದ 2 ಸಾವಿರದ ವರೆಗೆ ಇತ್ತು. ಈಗ 2 ಸಾವಿರದಿಂದ 2,500ರ ವರೆಗೆ ತಲುಪಿದೆ. ಒಳರೋಗಿಗಳ ಸಂಖ್ಯೆ 1,200ರಿಂದ 1,400ರ ವರೆಗೆ ತಲುಪಿದೆ ಎನ್ನುತ್ತಾರೆ ಕಿಮ್ಸ್ ವೈದ್ಯರು.
ಒಟ್ಟಿನಲ್ಲಿ ವಿಶೇಷ ಶಸ್ತ್ರಚಿಕಿತ್ಸೆ ಮೂಲಕ ರೋಗಿಗಳಿಗೆ ಮರುಜೀವ ನೀಡುತ್ತಿರುವ ಕಿಮ್ಸ್ ಸಾಧನೆಯನ್ನು ಎಲ್ಲರೂ ಮೆಚ್ಚಲೇ ಬೇಕು. ಅಂತೂ ಕಿಮ್ಸ್ ಆಸ್ಪತ್ರೆ ಸುವ್ಯವಸ್ಥೆಗೆ ಜನ ಫುಲ್ ಖುಷಿಯಾಗಿದ್ದಾರೆ. ಖಾಸಗಿ ಆಸ್ಪತ್ರೆ ಬಿಟ್ಟು ಜನರು ಕಿಮ್ಸ್ ನತ್ತ ಮುಖ ಮಾಡುತ್ತಿದ್ದಾರೆ.
Kshetra Samachara
24/06/2022 05:23 pm