ಕಲಘಟಗಿ : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲೆಂದು ಸರ್ಕಾರ ಕೋಟ್ಯಾಂತರ ರೂ,ಖರ್ಚು ಮಾಡಿ ಕೆಲವು ಅಗತ್ಯ ಸಲಕರಣೆಗಳನ್ನು ಸಾರ್ವಜನಿಕ ಆಸ್ಪತ್ರೆಗಳಿಗೆ ನೀಡಿರುತ್ತದೆ.
ಆದರೆ ಕಲಘಟಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಕೇಂದ್ರಕ್ಕೆ ನೀಡಿದ ವಸ್ತುಗಳನ್ನು ಮಳೆ ಗಾಳಿ ಬೀಸಲನ್ನು ಲೇಖಿಸದ ಸಿಬ್ಬಂದಿಗಳು ಬೇಜವಾಬ್ದಾರಿತನ ತೋರಿ ಮರದ ಕೆಳಗೆ ಬೇಕಾಬಿಟ್ಟಿಯಾಗಿ ಎಸೆದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಆಸ್ಪತ್ರೆಯಲ್ಲಿ ಬೇಕಾದಷ್ಟು ಸ್ಥಳವಿದ್ದರೂ ಸರಕಾರ ಸಕಾಲದಲ್ಲಿ ನೀಡಿದ ವಸ್ತುಗಳನ್ನು ಸರಿಯಾಗಿ ಜೋಪಾನ ಮಾಡದ ಈ ಸಿಬ್ಬಂದಿಗಳ ಮೇಲೆ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2022 02:14 pm