ಕಲಘಟಗಿ: ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಧಾರವಾಡ, ತಾಲ್ಲೂಕು ಪಂಚಾಯತಿ ಕಲಘಟಗಿ, ಗ್ರಾಮ ಪಂಚಾಯತಿ ಜಿನ್ನೂರ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕುರಿತು ಗೀಗಿ ಪದಗಳ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದ ಗೀಗಿ ಪದ ಮೇಳ ಸಂಗಡಿಗರಿಂದ ಗೀಗಿ ಪದ ಹಾಡುವ ಮೂಲಕ ಗ್ರಾಮೀಣ ಜನರಿಗೆ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿ ಹೇಳಲಾಯಿತು.
Kshetra Samachara
04/01/2022 01:39 pm