ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತ ಭಯಬೇಡ ಎಂದ ವೈದ್ಯಕೀಯ ಶಿಕ್ಷಣ ಸಚಿವ

ಹುಬ್ಬಳ್ಳಿ: ಕೋ ವ್ಯಾಕ್ಸಿನ್ ಸಾಕಷ್ಟು ಕ್ಲಿನಿಕಲ್ ಟ್ರೈಲ್ ಆದ ಬಳಿಕವೇ ವ್ಯಾಕ್ಸಿನೇಷನ್‌ ಗೆ ಅವಕಾಶ ನೀಡಲಾಗಿದೆ.ಸುಮಾರು 30 ಸಾವಿರಕ್ಕೂ ಹೆಚ್ಚು‌-ಜನರ ಮೇಲೆ ಕ್ಲಿನಿಕಲ್ ಟ್ರೈಲ್ ನಡೆಸಿರುವ ಮಾಹಿತಿ ಇದೆ.ನನ್ನ ಮಾಹಿತಿ ಪ್ರಕಾರ ಮೂರನೇ ಹಂತದ ಕ್ಲಿನಿಕಲ್ ಟ್ರೈಲ್ ಆಗಿದೆ.ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತವಾದ ಲಸಿಕೆ, ಯಾವುದೇ ಆತಂಕ‌ ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಹೇಳಿದರು.

ಕಿಮ್ಸ್ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋವಿಶಿಲ್ಡ್ ಅಥವಾ ಕೊವ್ಯಾಕ್ಸಿನ್ ಯಾವುದನ್ನು ಬೇಕಾದರು ತೆಗದುಕೊಳ್ಳಬಹುದು.ಇಂತಹದೇ ತೆಗೆದುಕೊಳ್ಳಬೇಕು ಎಂಬ ಯಾವುದೇ ಒತ್ತಡ ಇಲ್ಲ.ಕೊ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುತ್ತಿಲ್ಲ.ಕೊವ್ಯಾಕ್ಸಿನ್ ಬೇಡ ಅನ್ನೊರು ತೆಗೆದುಕೊಳ್ಳುವುದು ಬೇಡ ಎಂದರು.

ಕಿಮ್ಸ್ ಹಾಗೂ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಇನ್ನೂ ಉತ್ಕೃಷ್ಟ ಮಟ್ಟಕ್ಕೆ ಏರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಯೋಜನೆ ಜಾರಿಗೊಳಿಸಲಿದೆ.ಇನ್ನೂ ಕಿಮ್ಸ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಹಾಗೂ ಆರ್ಗನ್ ಟ್ರಾನ್ಸಪ್ಲಂಟೆಷನ್ ಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸ್ಸಿ ಅಗಲಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು.? ಅದು ನಿಷ್ಕ್ರಿಯವಾಗಿರುವ ರಾಜಕಾರಣಿಗಳು ಕಾಂಗ್ರೆಸ್ ಸೇರ್ಪಡೆ ಆಗಬಹುದು.ಆದ್ರೇ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ವಾಪಸ್ ಹೋಗುವುದಿಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

Edited By : Manjunath H D
Kshetra Samachara

Kshetra Samachara

19/01/2021 05:01 pm

Cinque Terre

35.06 K

Cinque Terre

0

ಸಂಬಂಧಿತ ಸುದ್ದಿ