ಹುಬ್ಬಳ್ಳಿ: ಕೋವಿಡ್-19 ವ್ಯಾಕ್ಸಿನ್ ಡ್ರೈರನ್ ಗೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಎಂಟು ಕಡೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ಸಿದ್ಧತೆ ನಡೆಸಿದ್ದು,ಈ ಹಿನ್ನೆಲೆಯಲ್ಲಿಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಲ್ಟಿಸ್ಪೇಶಾಲಿಟಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಡ್ರೈ ರನ್ ಅಣಕು ಪ್ರದರ್ಶನಕ್ಕೆ ಚಾಲನೇ ನೀಡಿದರು.
ಬಳಿಕ ಮಾತನಾಡಿದ ಅವರು, ಈಗಾಗಲೇ ಎಂಟು ಕಡೆಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ಗೆ ಸಿದ್ಧತೆ ನಡೆಸಿದ್ದು,ಇನ್ನೂ ಕೆಲವು ದಿನಗಳಲ್ಲಿ ವ್ಯಾಕ್ಸಿನ್ ಬರಲಿದ್ದು,ಧಾರವಾಡ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದೆ ಎಂದರು.
ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಗೆ ಚಾಲನೆ ನೀಡಿದ್ದೇವೆ. ಪ್ರಾಯೋಗಿಕವಾಗಿ ವ್ಯಾಕ್ಸಿನೇಶನ್ ಡ್ರೈ ರನ್ ಗೆ ಚಾಲನೆ ನೀಡಲಾಗಿದ್ದು,ಈಗಾಗಲೇ ವೈದ್ಯಕೀಯ ಸಿಬ್ಬಂದಿಗಳಿಗೆ ಈ ಬಗ್ಗೆ ಎಲ್ಲ ರೀತಿ ತರಬೇತಿ ನೀಡಲಾಗಿದ್ದು,ಸುಮಾರು 22 ಸಾವಿರ ಜನರಿಗೆ ವ್ಯಾಕ್ಸಿನ್ ನೀಡುವ ಗುರಿಯನ್ನು ಹೊಂದಿದ್ದೇವೆ.
ಎಂಟು ಆಸ್ಪತ್ರೆಗಳಲ್ಲೂ ಇಂದು ಡ್ರೈರನ್ ಪರೀಕ್ಷೆ ನಡೆಯುತ್ತಿದ್ದು,ಮೊದಲಿಗೆ 25 ಜನ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್ ಅಣಕು ಪರೀಕ್ಷೆ ನಡೆಸಿದ್ದು,ವ್ಯಾಕ್ಸಿನ್ ಗೆ ಎಲ್ಲ ರೀತಿಯ ಸಿದ್ದತೆ ಮಾಡಿದೆ ಎಂದು ಭರವಸೆ ನೀಡಿದರು.
Kshetra Samachara
08/01/2021 12:46 pm