ಹುಬ್ಬಳ್ಳಿ: ಕೋವಿಡ್-19 ವ್ಯಾಕ್ಸಿನ್ ಡ್ರೈರನ್ ಗೆ ಹುಬ್ಬಳ್ಳಿಯಲ್ಲಿ ಸಿದ್ದತೆ ನಡೆಸಿದ್ದು,ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಲಿರುವ ಡ್ರೈರನ್ ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಡ್ರೈರನ್ ಗೆ ಸಿದ್ದತೆ ನಡೆಸಲಾಗುತ್ತಿದೆ.ಧಾರವಾಡ ಜಿಲ್ಲೆಯಲ್ಲಿ ಎಂಟು ಆಸ್ಪತ್ರೆಗಳಲ್ಲಿ ನಡೆಯಲಿರುವ ಡ್ರೈ ರನ್ ಗೆ ಭರದಿಂದ ಸಿದ್ಧತೆ ನಡೆದಿದೆ.ಇನ್ನೂ ಹುಬ್ಬಳ್ಳಿ ನಗರದಲ್ಲಿ 3 ಆಸ್ಪತ್ರೆಗಳಲ್ಲಿ ಡ್ರೈ ರನ್ ಗೆ ಸಿದ್ಧತೆ ಮಾಡಲಾಗಿದ್ದು,
ಮೊದಲಿಗೆ ಕಿಮ್ಸ್ ವೈದ್ಯಕೀಯ ಸಿಬ್ಬಂದಿಗೆ ಇಂದು ವ್ಯಾಕ್ಸಿನ್ ಡ್ರೈರನ್ ನಡೆಯಲಿದೆ.
Kshetra Samachara
08/01/2021 10:52 am