ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರೋಗಕ್ಕೆ ತುತ್ತಾಗಿ ಜಾನುವಾರು ಸತ್ತರೂ ಸಿಗೋಲ್ಲಾ ವೈದ್ಯರು !

ನಮಸ್ಕಾರೀ ಕುಂದಗೋಳ ತಾಲೂಕಿನ ರೈತಾಪಿ ಮಂದಿಗೆ ಮತ್ತೇನ್ರಿ ನಿಮ್ಮ ಮನ್ಯಾಗೀನ ದನಾ, ಕರಾ, ಕುರಿ, ಆಡು, ಎತ್ತು, ಎಮ್ಮೆ, ಆಕಳು ಹೆಂಗ್ ಅದಾವ್ರೀ ಆರಾಮ ಅದಾವ್ ಏನ್ರೀ.

ಏ ಯಾರೋಪಾ ಇವ್ರ ಮನಾಷ್ಯಾರನ್ನ ಬಿಟ್ಟು ಇವ್ರೇನ್ ಬರೇ ಎತ್ತು, ಎಮ್ಮೆ, ಕುರಿ, ಕ್ವಾಣ ಇದರ ಬಗ್ಗೆನ ಕೇಳಕತ್ತಾರ್ ಅನಕೊಂಡ್ರೀ ಹೌದಿಲ್ಲ! ಹೌದ್ರಿಪಾ ನಾವು ನಿಮ್ಮ ಮನ್ಯಾಗ ಇರೋ ಜಾನುವಾರು ಆರೋಗ್ಯದ ಬಗ್ಗೆ ವಿಚಾರ ಮಾಡ್ತಾ ಇದ್ದೇವೆ.

ಯಾಕಂದ್ರೆ ಎಡೆಬಿಡದೆ ಸುರಿವ ಮಳೆ, ತಂಪಾದ ಹವಾಗುಣ, ಕುಂದಗೋಳ ತಾಲೂಕಿನಾದ್ಯಂತ ಜಾನುವಾರುಗಳಿಗೆ ಕಾಲು ಬೇನೆ, ಬಾಯಿ ಬೇನೆ, ಕಣ್ಣಲ್ಲಿ ನೀರು ಸ್ರಾವ, ಜ್ವರ, ಚಳಿ, ಚರ್ಮದ ಮೇಲೆ ಗುಳ್ಳೆ, ತುರಿಕೆ ಸೇರಿದಂತೆ ನಾನಾ ರೋಗ ಬರ್ತಾ ಅದಾವ್ ಅದಕ್ಕೆ ನೀವೇನಾದ್ರೂ ಪಶು ವೈದ್ಯರನ್ನು ಹುಡಕಿದ್ರೇ ನಿಮಗೆ ಪಶು ವೈದ್ಯರು ಸೂಕ್ತ ಸಮಯಕ್ಕೆ ಸಿಗೋದೆ ಡೌಟು ನೋಡ್ರಿ.

ಕುಂದಗೋಳ ತಾಲೂಕಿನಾದ್ಯಂತ ಇರುವ 19 ಪಶು ಚಿಕಿತ್ಸಾ ಕೇಂದ್ರ ಹಾಗೂ ಒಂದು ಸಂಚಾರಿ ಪಶು ಚಿಕಿತ್ಸಾ ವಾಹನ ಸೇರಿ ಒಟ್ಟು 13 ವೈದ್ಯಾಧಿಕಾರಿ ಹುದ್ದೆ ಒಳಗೆ ಕೇವಲ 4 ಮಂದಿ ವೈದ್ಯರು ಅದಾರ್ 09 ಹುದ್ದೆ ಖಾಲಿ ಅದಾವ್ರೀ ಮತ್ತ್ ಪಶು ವೈದ್ಯಕೀಯ ಪರಿವೀಕ್ಷಕರು 34 ಹುದ್ದೆ ಒಳಗೆ 08 ಮಂದಿ ಕೆಲಸಕ್ಕೆ ಅದಾರ್ 26 ಹುದ್ದೆ ಖಾಲಿ ಅದಾವು, ಇನ್ನ 'ಡಿ' ದರ್ಜೆ ಹುದ್ದೆ 30ರ ಒಳಗೆ ಬರೆ 04 ಮಂದಿ ಕೆಲಸಕ್ಕೆ ಅದಾರ 26 ಹುದ್ದೆ ಖಾಲಿ ಖಾಲಿ ಅದಾವ್ ನೋಡ್ರಿ ಪಾ.

ಮುಖ್ಯವಾಗಿ ಈಗಾಗಲೇ ತಯಾರಾದ ಕಳಸ, ಪಶುಪತಿಹಾಳ, ಯರಗುಪ್ಪಿ ಸೇರಿ ಹಲವಾರು ಪಶು ಆಸ್ಪತ್ರೆ ಇನ್ನೂ ಉದ್ಘಾಟನೆ ಕಂಡಿಲ್ಲಾ.

ಇಂತಹ ಪರಿಸ್ಥಿತಿ ಒಳಗೆ ರೈತರು ಜಾನುವಾರು ಆಡು, ಕುರಿ, ಕೋಳಿ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಪ್ರಾಣ ಬಿಡ್ತಾ ಇದ್ರೂ ಜನಪ್ರತಿನಿಧಿಗಳು ಮತ್ತ್ ಸರ್ಕಾರ ಕಣ್ಮುಚ್ಚಿ, ಬಾಯ್ಮುಚ್ಚಿ ಕುಂತಾರ್.

ಒಟ್ಟಾರೆ ಅನ್ನದಾತನ ಮನೆಗೆ ಆಸರೆಯಾದ ಜಾನುವಾರುಗಳ ರೋಗಕ್ಕೆ ಚಿಕಿತ್ಸೆ ನೀಡಲು ಕುಂದಗೋಳ ತಾಲೂಕಿನಲ್ಲಿ ಒಟ್ಟು 61 ಹುದ್ದೆ ಖಾಲಿ ಅದಾವು ನೋಡ್ರಿ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/07/2022 02:13 pm

Cinque Terre

50.6 K

Cinque Terre

0

ಸಂಬಂಧಿತ ಸುದ್ದಿ