ಧಾರವಾಡ : ನಗರದ ವಾರ್ಡ್ ನಂಬರ್ 18ರ ತೇಜಸ್ವಿ ನಗರ ಸೊಸೈಟಿ ಏರಿಯಾದಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರಂಗೋಲಿ ಹಾಕುವ ಮೂಲಕ ರಸ್ತೆ ಮೇಲೆ ಕಸ ಚೆಲ್ಲಬಾರದು ಎಂದು ಆರೋಗ್ಯ ಖಾತೆಯ ನಿರೀಕ್ಷಕರು, ಸುಪ್ರವೈಸರ್, ಪೌರಕಾರ್ಮಿಕರು ಮತ್ತು ವಲಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಜನಜಾಗೃತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಮನೆ ಮನೆಗೆ ಕಸ ಸಂಗ್ರಹಿಸಲು ಆಟೋ, ಟಿಪ್ಪರ್ ನಿಯೋಜಿಸಿದ್ದು, ಸಾರ್ವಜನಿಕರು ಕಸ ಸಂಗ್ರಹಣಾ ವಾಹಣಕ್ಕೆ ಕಸ ನೀಡಿ, ನಗರದ ಸ್ವಚ್ಛತೆ ಕಾಪಾಡುವಲ್ಲಿ ಕೈಜೋಡಿಸಬೇಕೆಂದು ವಾರ್ಡ್ ನ ಆರೋಗ್ಯ ನಿರೀಕ್ಷಿಕರಾದ ಜ್ಯೋತಿ ಸಿ. ಚುಳಕಿಮಠ ಮತ್ತು ಸುಪ್ರವೈಸರ್ ಜೋಸೆಫ್ ಚೆಂಚುಗಲ್ಲ ಅವರು ಸ್ಥಳೀಯರಿಗೆ ಮನವಿ ಮಾಡಿಕೊಂಡರು. ಈ ಸಂಧರ್ಭದಲ್ಲಿ ಆರೋಗ್ಯ ನಿರೀಕ್ಷಿಕರಾದ ಪಕ್ಕೀರಪ್ಪಾ ಮಾದರ ಮತ್ತು ಸಿದ್ದಾರ್ಥ್ ನೀಡವಣಿ ಸೇರಿದಂತೆ ಹಲವರು ಇದ್ದರು.
Kshetra Samachara
19/12/2021 09:37 am