ಕೇಂದ್ರದ ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆ ಆರ್ಥಿಕ ನೆರವಿನಿಂದ ಅಣ್ಣಿಗೇರಿ ಹಾಗೂ ನವಲಗುಂದ ನಗರಕ್ಕೆ ಪಶು ಸಂಜೀವಿನಿ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ನೀಡಲಾಗಿದೆ. ಈ ವಾಹನಕ್ಕೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಚಾಲನೆ ನೀಡಿದರು.
ಅಣ್ಣಿಗೇರಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ರೈತ ಕುಟುಂಬಗಳ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಕೈಗೊಂಡಿರುವ ಯೋಜನೆಯಾಗಿದೆ. ಇದು ದೇಶದಲ್ಲೇ ಇಂತಹ ಮೊದಲ ಯೋಜನೆಯಾಗಿದೆ. ಇದರಿಂದ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಇದರ ಸದುಪಯೋಗವನ್ನು ರೈತರು ತೆಗೆದುಕೊಳ್ಳಬೇಕು ಎಂದು ಸಚಿವರು ಮಾತನಾಡಿದರು.
Kshetra Samachara
02/08/2022 12:53 pm