ಹುಬ್ಬಳ್ಳಿ: ಮನೆಯಿಂದ ಹೊರಗೆ ಕಾಲು ಇಟ್ಟರೇ ಸಾಕು ಮೂಗಿಗೆ ಮಾಸ್ಕ್ ಬೀಳುವಂತೆ ಎಲ್ಲೆಡೆಯೂ ಕೊರೋನಾ ಕೊರೋನಾ ಶಬ್ದ ಮೊಳಗುತ್ತಿದೆ. ಎರಡನೇ ಅಲೆಯ ಆತಂಕ ದೂರವಾಗುವ ಮುನ್ನವೇ ಮೂರನೆಯ ಅಲೆಯು ಮತ್ತಷ್ಟು ಭಯವನ್ನು ಹುಟ್ಟು ಹಾಕುತ್ತಿದೆ. ಇಷ್ಟು ಭಯದ ಮಧ್ಯೆಯೂ ವ್ಯಾಕ್ಸಿನ್ ಅಭಿಯಾನ ಮಾತ್ರ ಕುಂಟುತ್ತಾ ಸಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಅಭಿಯಾನ ಒಂದಿಲ್ಲೊಂದು ರೀತಿಯಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಮೊದಲ ಡೋಸ್ ನಲ್ಲಿ 100% ಪ್ರಗತಿ ಸಾಧಿಸಿದ್ದೇವೆ ಎಂದು ಸರ್ಕಾರ ಹಾಗೂ ಅಧಿಕಾರಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೂ ಕೂಡ ಇದುವರೆಗೂ ಅದೆಷ್ಟೋ ಜನ ಮೊದಲ ಡೋಸ್ ಹಾಕಿಸಿಕೊಂಡಿಲ್ಲ. ಹೇಗೆ ಅಂತೀರಾ ಇಲ್ಲಿ ಅಜ್ಜಿಯ ವಿಡಿಯೋ ಒಮ್ಮೆ ನೋಡಿ...
ಅಜ್ಜಿಯ ರಂಪಾಟದ ವಿಡಿಯೋ ನೋಡಿದ್ರಲ್ಲ. ಇದೇ ನೋಡ್ರಿ ಇನ್ನೂ ಅದೆಷ್ಟೋ ಮಂದಿಗೆ ವ್ಯಾಕ್ಸಿನ್ ದೊರೆತಿಲ್ಲ. ಆದರೂ ಕೂಡ 100% ವ್ಯಾಕ್ಸಿನ್ ಮಾಡಿದ್ದೇವೆ ಮತ್ತು 80% ಎರಡನೇ ಡೋಸ್ ವ್ಯಾಕ್ಸಿನ್ ನೀಡಿದ್ದೇವೆ ಎನ್ನುತ್ತಾರೆ. ವಿಪರ್ಯಾಸಕರ ಸಂಗತಿ ಅಂದರೆ ಅದೆಷ್ಟೋ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳದೆಯೇ ಮೆಸೇಜ್ ನೋಡಿ ಸುಮ್ಮನಾಗಿದ್ದಾರೆ.
ಇನ್ನೂ ಮೊದಲ ಕಾರ್ಯವೇ ಪೂರ್ಣಗೊಂಡಿಲ್ಲ. ಅದರಲ್ಲಿಯೇ ಈಗ ಮತ್ತೇ ಬೂಸ್ಟರ್ ಡೋಸ್ ಕೊಡಲು ಸರ್ಕಾರ ಮುಂದಾಗಿದೆ. ಕಣ್ಣಿಗೆ ಕಾಣುವವರಿಗೆ ವ್ಯಾಕ್ಸಿನ್ ಕೊಡಲು ಸರ್ಕಾರ ಮುಂದಾಗಿದೆ ವಿನಃ ಅದೆಷ್ಟೋ ಜನರು ಇದುವರೆಗೂ ಯಾವುದೇ ರೀತಿಯಲ್ಲಿ ವ್ಯಾಕ್ಸಿನ್ ಕೂಡ ಪಡೆದಿಲ್ಲ. ಅಂತಹವರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಮುಂದಾಗಿಲ್ಲ. ಈಗ ಮತ್ತೇ 15-18 ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನ್ ಹಾಕಲು ಹೊರಟಿದ್ದಾರೆ.
ಒಟ್ಟಿನಲ್ಲಿ ನಮ್ಮ ಸರ್ಕಾರದ ವ್ಯವಸ್ಥೆ ಹೇಗೆ ಎಂದರೇ ಹೊಸದನ್ನು ಅಪ್ಪಿಕೊಂಡು ಹಳೆಯದನ್ನು ಅರ್ಧದಲ್ಲಿಯೇ ಕೈ ಬಿಡುವ ಮನಸ್ಥಿತಿಗೆ ಬಂದು ನಿಂತಿದ್ದು, ಆಡಳಿತ ವ್ಯವಸ್ಥೆ ಅರ್ಥವಾಗದೇ ಇರುವುದೇ ವಿಪರ್ಯಾಸಕರ ಸಂಗತಿಯಾಗಿದೆ.
Kshetra Samachara
10/01/2022 07:10 pm