ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೋನಾ ಮೂರನೇ ಅಲೆ ಮುಗಿಯುವವರೆಗೂ ಪಾಲಿಕೆ ಚುನಾವಣೆ ಬೇಡ...!

ಹುಬ್ಬಳ್ಳಿ: ಸುಮಾರು ಮೂರು ವರ್ಷಗಳಿಂದ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ಅನಾಥವಾಗಿದ್ದ ಹು-ಧಾ ಮಹಾನಗರ ಪಾಲಿಕೆಗೆ ಚುನಾವಣೆ ಏನೋ ಸಮೀಪಿಸುತ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ.

ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದ ಬೆನ್ನಲ್ಲೇ ಹು-ಧಾ ಮಹಾನಗರ ಪಾಲಿಕೆಯು 8,13,257 ಮತದಾರರ ಮತದಾನಕ್ಕೆ 837 ಮತಗಟ್ಟೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ. ಆದರೆ ಕಿಲ್ಲರ್ ಕರೋನಾ ಹಾವಳಿಯಿಂದ ಈಗ ಚುನಾವಣೆ ನಡೆಸುವುದು ಬೇಡ ಎಂಬುವಂತ ಮಾತು ಕನ್ನಡ ಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ.

ಕೋವಿಡ್ ಮೂರನೇ ಅಲೆಯು ಪ್ರಾರಂಭವಾಗಿದ್ದು, ಮೊದಲನೇಯ ಮತ್ತು ಎರಡನೇ ಅಲೆಗಿಂತ ಮೂರನೆಯ ಅಲೆಯು ತೀವ್ರತೆಯು ಹೆಚ್ಚಾಗಿದ್ದು, ಸಂಪೂರ್ಣ ವ್ಯಾಕ್ಸಿನ್ ಅಭಿಯಾನ ಪೂರ್ಣಗೊಳ್ಳುವವರೆಗೂ ಚುನಾವಣೆ ನಡೆಸುವುದು ಬೇಡ ಎಂಬುವಂತೇ ಸರ್ಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಅಂತು ಇಂತೂ ಚುನಾವಣೆ ಬಂತು ಎಂದುಕೊಳ್ಳುವಷ್ಟರಲ್ಲಿ ಈಗ ಮೂರನೇ ಅಲೆಯ ಆತಂಕ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಇನ್ನಾದರೂ ಕೊರೋನಾ ತೊಲಗಿ ಚುನಾವಣೆ ನಡೆದು ಅವಳಿನಗರದ ಅಭಿವೃದ್ಧಿ ಆಗಲಿ ಎಂಬುವುದೇ ನಮ್ಮ ಆಶಯ..

Edited By : Manjunath H D
Kshetra Samachara

Kshetra Samachara

02/08/2021 01:50 pm

Cinque Terre

67.35 K

Cinque Terre

23

ಸಂಬಂಧಿತ ಸುದ್ದಿ