ಧಾರವಾಡ: ವಿಶ್ವದೆಲ್ಲೆಡೆ ಕೊರೊನಾ ಎರಡನೇ ಅಲೆ ಬಂದಿದೆ. ನಮ್ಮ ದೇಶದ ದೆಹಲಿ, ಅಹ್ಮದಾಬಾದ್ ನಲ್ಲಿ ಕೊರೊನಾ ಎರಡನೇ ರೂಪ ತೋರಿಸುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಒಬ್ಬ ವ್ಯಕ್ತಿಗೆ 45 ದಿನದಿಂದ ಎರಡು ತಿಂಗಳ ಬಳಿಕ ಬರಲಿದೆ. ಅದು ಬಂದೇ ಬರಬೇಕು ಎಂಬ ಕಾನೂನು ಇಲ್ಲ. ಅದು ನಮ್ಮ ಜನರ ನಡುವಳಿಕೆ ಮೇಲೆ ಹೋಗುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ನಡೆದುಕೊಂಡರೆ ಎರಡನೇ ಬಾರಿಗೆ ಕೊರೊನಾ ಬರುವುದು ಕಡಿಮೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ದೆಹಲಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಅದನ್ನು ಪದೇ ಪದೇ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ಕಾಲೇಜು ಆರಂಭ ಮಾಡಿದಾಗಿನಿಂದ 120 ರಿಂದ 130 ಜನರಿಗೆ ಕೊರೊನಾ ಬಂದಿದೆ ಎಂಬ ಮಾಹಿತಿ ಇದೆ. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಕಾಲೇಜು ಆರಂಭಿಸಿದ್ದೇವೆ. ಸೋಂಕು ಹೆಚ್ಚಳವಾದ್ರೆ ಮತ್ತೆ ಕಾಲೇಜು ಬಂದ್ ಮಾಡುತ್ತೇವೆ ಎಂದರು.
Kshetra Samachara
21/11/2020 05:50 pm