ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಂಬಾಕು, ಡ್ರಗ್ಸ್ ಹಾವಳಿ; ವಿದ್ಯಾರ್ಥಿಗಳಿಂದ ಜನಜಾಗೃತಿ ರ‍್ಯಾಲಿ

ಹುಬ್ಬಳ್ಳಿ: ಇಂದು ಯುವಜನರು ಹೆಚ್ಚಾಗಿ ತಂಬಾಕು ಮತ್ತು ಡ್ರಗ್ಸ್ ನಂತಹ ಮಾರಕ ಚಟಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ದೇಶ ತಂಬಾಕು ಮತ್ತು ಡ್ರಗ್ಸ್ ಮುಕ್ತವಾಗಲಿ ಎಂಬ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ರ‌್ಯಾಲಿ ಮಾಡುವುದರ ಮೂಲಕ 'ತಂಬಾಕು ಮತ್ತ ಡ್ರಗ್ಸ್' ಬಗ್ಗೆ ಜಾಗೃತಿ ಮೂಡಿಸಿದರು.

ನಗರದ ಎಸ್‌ಜೆಎಮ್‌ವಿಎಸ್ ಆರ್ಟ್ಸ್ ಆಂಡ್ ಕಾಮರ್ಸ್ ಕಾಲೇಜು ಮೂರು ಸಾವಿರ ಮಠ ವಿದ್ಯಾರ್ಥಿಗಳು ಕಾಲೇಜಿನಿಂದ ನಗರದ ಚೆನ್ನಮ್ಮ ಸರ್ಕಲ್ ವರೆಗೆ ರ‌್ಯಾಲಿ ನಡೆಸಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸಿದರು.

ರ‍್ಯಾಲಿಗೆ ಶ್ರೀ ಮೂರು ಸಾವಿರ ಮಠದ ಮುಜುಗು ಸ್ವಾಮೀಜಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಚೆನ್ನಮ್ಮ ಸರ್ಕಲ್ ನಲ್ಲಿ ಜನಜಾಗೃತಿ ಬಗ್ಗೆ ಘೋಷಣೆ ಕೂಗಿದರು.

ಪ್ರೊ. ಅಣ್ಣಪ್ಪ ಕೊರವರ, ಎಮ್.ಬಿ. ಆಡುರ, ಎಮ್.ಬಿ. ಅಂಗಡಿ, ಜಯಾ ಅಂಗಡಿ, ಸಿ.ಎಮ್. ಕೊಡ್ಲಿ, ಮೊರಬದ್, ಕೋಮಲ್, ಯಜುರ್ವೇದ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/06/2022 10:33 am

Cinque Terre

19.37 K

Cinque Terre

1

ಸಂಬಂಧಿತ ಸುದ್ದಿ