ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಷ್ಟರ ಮಟ್ಟಿಗೆ ಇತ್ತು ಅಂದ್ರೇ ಹೊರಗೆ ಹೋದ್ರೇ ಏನಾಗುತ್ತೋ ಅನುತ್ತಿದ್ದ ಆತಂಕವೊಂದು ದೂರಾಗಿದೆ. ಶಾಲಾ ಕಾಲೇಜು ಸ್ಟಾರ್ಟ್ ಆದ್ರೇ ಮತ್ತೇ ಏನಾದರೂ ಸಮಸ್ಯೆ ಆದ್ರೇ ಎಂಬುವಂತ ಆತಂಕ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿತ್ತು.ಆದ್ರೇ ಈಗ ನಿರೀಕ್ಷೆಗೂ ಮೀರಿ ಬೆಳವಣಿಗೆ ಆಗಿದೆ.ಹಾಗಿದ್ದರೇ ಏನಿದು ಬೆಳವಣಿಗೆ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಕೊರೋನಾದಿಂದಾಗಿ ಹತ್ತು ತಿಂಗಳು ಶಾಲೆ ಕಾಲೇಜು ಬಾಗಿಲು ತೆರದಿರಲಿಲ್ಲ.ಶುಕ್ರವಾರದಿಂದ ಶಾಲಾ ಕಾಲೇಜು ಪ್ರಾರಂಭಿಸಲಾಗಿದ್ದು,ಗುರುವೃಂದ ಹಾಗೂ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದಲೇ ಶಾಲೆ ಕಾಲೇಜಿಗೆ ಆಗಮಿಸುತ್ತಿದ್ದಾರೆ.
ಎರಡನೇ ದಿನವೂ ಕೋವಿಡ್ ನಿಯಮ ಪಾಲಿಸಿದ್ದು,ಶಾಲೆ ಕಾಲೇಜು ಪುನರ ಆರಂಭಗೊಂಡ ಎರಡನೇ ದಿನವಾದ ಶನಿವಾರ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಳ ಕಂಡುಬಂದಿದೆ.
ಪಿಯು ಹಾಗೂ ಎಸ್.ಎಸ್.ಎಲ್.ಸಿ ತರಗತಿಗಳಿಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷ.ವಿದ್ಯಾರ್ಥಿಗಳು ಆಗಮಿಸುತ್ತಿದ್ದಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.ಇದರಿಂದ ಮಕ್ಕಳಲ್ಲಿರುವ ಕೊರೋನಾ ಭಯ ದೂರ ಮಾಡಲು ಸಾಧ್ಯವಾಯಿತು.
6 ರಿಂದ 9 ರಿಂದ ವಿದ್ಯಾಗಮ ಪ್ರಾರಂಭವಾಗಿದ್ದು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತರಗತಿಗಳು ಪೂರ್ಣ ತರಗತಿಗಳು ನಡೆಯುತ್ತಿದೆ.ಹತ್ತನೆಯ ತರಗತಿಯಲ್ಲಿ 38446 ದಾಖಲಾತಿ ಇದ್ದು,ಇದರಲ್ಲಿ 16948 ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಆರನೇ ತರಗತಿ ದಾಖಲಾತಿ 41,471 ಹಾಜರಾತಿ 9622, ಏಳನೇ ತರಗತಿ 41140 ದಾಖಲಾತಿ ಹೊಂದಿದ್ದು, 13383 ಹಾಜರಾತಿ ಹೊಂದಿದೆ.ಏಂಟನೇ ತರಗತಿ 40,012 ದಾಖಲಾತಿ ಇದ್ದು,9,439 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಒಂಬತ್ತನೇ ತರಗತಿಯಲ್ಲಿ ಒಟ್ಟು 40549 ದಾಖಲಾತಿ ಇದ್ದು,7703 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.ಪಿಯುಸಿಯಲ್ಲಿ ಒಟ್ಟು ದಾಖಲಾತಿ ಇರುವುದು 21,487 ವಿದ್ಯಾರ್ಥಿಗಳಿದ್ದು,7259 ವಿದ್ಯಾರ್ಥಿಗಳು ಹಾಜರಾಗಿರುವುದು ವಿಶೇಷವಾಗಿದೆ.
ಒಟ್ಟು ಶೇ 44 ವಿದ್ಯಾರ್ಥಿಗಳು ಆಗಮಿಸಿದ್ದು,ವಿದ್ಯಾರ್ಥಿಗಳಲ್ಲಿಯೂ ಕೊರೋನಾ ಭಯ ದೂರವಾಗಿದೆ.ಇನ್ನೂ ಪಾಲಕರಲ್ಲಿಯೂ ಕೂಡ ಕೊರೋನಾ ಆತಂಕ ದೂರವಾಗಿದ್ದು,ಹತ್ತು ತಿಂಗಳ ನಂತರ ಶಾಲಾ ಕಾಲೇಜು ಪ್ರಾರಂಭವಾಗಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನೂ ಸುಮಾರು ಹತ್ತು ತಿಂಗಳು ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲಾ ಕಾಲೇಜು ಪ್ರಾರಂಭಗೊಂಡಿರುವುದು ಖುಷಿಯ ಸಂಗತಿಯಾಗಿದೆ.
ಸರ್ಕಾರ ವಿದ್ಯಾರ್ಥಿಗಳ ಹಾಗೂ ಪಾಲಕರಲ್ಲಿರುವ ಆತಂಕ ದೂರಮಾಡಲು ಸಾಕಷ್ಟು ಶ್ರಮವಹಿಸಿ ನಿರ್ಧಾರ ಕೈಗೊಂಡು ಹಲವಾರು ನಿರ್ದೇಶನಗಳ ಮೂಲಕ ಶಾಲಾ ಕಾಲೇಜು ಪ್ರಾರಂಭಿಸಿದೆ.ಆದರೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ.
Kshetra Samachara
03/01/2021 02:04 pm