ಹುಬ್ಬಳ್ಳಿ: ಕೊರೋನಾ ಕರಿ ನೆರಳು ಸರಿದು ಎಲ್ಲರ ಬಾಳಲ್ಲಿ ಹೊಸ ವರ್ಷ ಹೊಸ ಚೈತನ್ಯ ತುಂಬಲಿ ಎಂಬುವಂತ ಸದುದ್ದೇಶದಿಂದ ಆನ್ ಲಾಕ್ ಬಳಿಕ 2021 ಜ.01ರಿಂದ ದ್ವೀತಿಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಶಾಲಾ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜು ಪ್ರಾರಂಭಕ್ಕೆ ಭರದ ಸಿದ್ಧತೆ ನಡೆದಿದೆ.
ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬೆಳಿಗ್ಗೆಯಿಂದಲೇ ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಮಾಡಲಾಗುತ್ತಿದೆ.ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಬೆಳಿಗ್ಗೆಯಿಂದಲೇ ಸ್ಯಾನಿಟೈಸರ್ ಕಾರ್ಯ ಚುರುಕುಗೊಂಡಿದೆ.
Kshetra Samachara
31/12/2020 04:32 pm