ಧಾರವಾಡ: ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ನೀಡಿರುವ ಆದೇಶವನ್ನು ಶಾಲಾ, ಕಾಲೇಜುಗಳು ಪಾಲನೆ ಮಾಡುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಧಾರವಾಡ ಲೋಕಾಯುಕ್ತ ಅಧಿಕಾರಿಗಳು ಇಂದು ಹಲವು ಶಾಲೆ-ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಶ್ರೀಮತಿ ಜಿಗಳೂರ ಕಲಾ ಹಾಗೂ ಶ್ರೀಮತಿ ಎಸ್.ಎಂ.ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಾರವಾಡ ಲೋಕಾಯುಕ್ತ ಎಸ್‌ಪಿ ವಿಜಯಕುಮಾರ ಬಿಸನಳ್ಳಿ, ಪೊಲೀಸ್ ಉಪಾಧೀಕ್ಷಕ ಎಚ್.ಕೆ.ಪಠಾಣ್, ಸಿಬ್ಬಂದಿಯಾದ ಆರ್.ಕೆ.ಕೊಪ್ಪದ, ವಿ.ಎಲ್.ಕುಲಕರ್ಣಿ, ಎ.ಎಂ.ಉಳ್ಳಿಗೇರಿ ಪರಿಶೀಲನೆ ನಡೆಸಿದರು.
ಅನಿರೀಕ್ಷಿತ ಭೇಟಿ ನೀಡಿದ ಮೇಲೆ ಲೋಕಾಯುಕ್ತ ಅಧೀಕ್ಷಕ ವಿಜಯಕುಮಾರ ಬಿಸನಳ್ಳಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
Kshetra Samachara
22/09/2021 08:46 pm