ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋವಿಡ್ ಅಲೆಯಲ್ಲೂ ಮಕ್ಕಳಿಗೆ ಸೂರ್ಯ ನಮಸ್ಕಾರ ಆದೇಶ: ಸಂಕಷ್ಟದಲ್ಲಿ ಶಿಕ್ಷಕರು-ಮಕ್ಕಳು

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ 1 ರಿಂದ 8 ನೇ ತರಗತಿ ವರೆಗೂ ಶಾಲೆ ಬಂದ್ ಮಾಡಲಾಗಿದೆ.ಆದರೆ ಒಂದು ಕಡೆ ಜಿಲ್ಲಾಧಿಕಾರಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರೆ, ಇನ್ನೊಂದು ಕಡೆ ಡಿಡಿಪಿಐಯಿಂದ ಸಂಕ್ರಾಂತಿ ಪ್ರಯುಕ್ತ ಸೂರ್ಯ ನಮಸ್ಕಾರ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇದರಿಂದ ಈಗ ಶಿಕ್ಷಕರಿಗೆ ಏನು ಮಾಡಬೇಕು ಅನ್ನೋದೇ ತಿಳಿಯದಂತಾಗಿದೆ.

ಮೂರನೇ ಅಲೆ ತೀವ್ರತೆಯಿಂದ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಆದೇಶದವರೆಗೆ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ, ಪ್ರತಿ ದಿನದ ಸಾಮೂಹಿ ಪ್ರಾರ್ಥನೆಗಳು ಮುಂದಿನ ಆದೇಶದವರಗೆ ಮೊಟಕು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ‌ ನಿತೀಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 1-8ನೇ ತರಗತಿಯವರೆಗೆ ಭೌತಿಕ ತರಗತಿ ಸ್ಥಗಿತಗೊಳಿಸಲಾಗಿದೆ. ಇತರೆ ಎಲ್ಲಾ ತರಗತಿಗಳು ನಡೆಯಲಿವೆ. ಮಕ್ಕಳಿಂದ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಬೇಕೋ ಅಥವಾ ಕೋವಿಡ್‌ನಿಂದಾಗಿ ರದ್ದುಗೊಳಿಸಬೇಕೋ..? ಈ ಕುರಿತು ಶಿಕ್ಷಣ ಇಲಾಖೆಯಿಂದ ಸ್ಪಷ್ಟ ಆದೇಶ ಅಥವಾ ಸುತ್ತೋಲೆಗಳು ಇಲ್ಲದ ಪರಿಣಾಮ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ. ಆದಷ್ಟು ಬೇಗ ಇದರ ಬಗ್ಗೆ ಜಿಲ್ಲಾಧಿಕಾರಿ ನಿತೀಶ ಪಾಟೀಲ್ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ.

Edited By : Manjunath H D
Kshetra Samachara

Kshetra Samachara

13/01/2022 04:12 pm

Cinque Terre

40.45 K

Cinque Terre

2

ಸಂಬಂಧಿತ ಸುದ್ದಿ