ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 20 ತಿಂಗಳ ಬಳಿಕ ಶಾಲೆ ಶುರು : ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

ಧಾರವಾಡ: ಹೆಮ್ಮಾರಿ ಸೋಂಕಿನಿಂದ ಶಾಲೆಯ ಮುಖ ಮರೆತ್ತಿದ್ದ ಮಕ್ಕಳು ಬರೋಬ್ಬರಿ 20 ತಿಂಗಳ ಬಳಿಕ ಇಂದಿನಿಂದ ಮರಳಿ ಶಾಲೆ ಹೊರಟ್ಟಿದ್ದಾರೆ.

ಇಂದಿನಿಂದ ಒಂದರಿಂದ ಐದನೇ ತರಗತಿಯ ಶಾಲೆ ಪುನರಾರಂಭವಾಗುತ್ತಿದ್ದು ಬ್ಯಾಗ್ ಹಿಡಿದು ಶಾಲೆಗೆ ಹೊರಡಲು ಮಕ್ಕಳು ಅಣಿಯಾಗಿದ್ದಾರೆ.

ಶಿಕ್ಷಣ ಇಲಾಖೆ ಹಂತ ಹಂತವಾಗಿ ಶಾಲೆ ತೆರವಿಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇಂದು ಜಿಲ್ಲೆಯಲ್ಲಿ ಒಂದರಿಂದ ಐದನೇ ತರಗತಿಗಳ ವಿದ್ಯಾರ್ಥಿಗಳು ಶಾಲೆಯತ್ತ ಮುಖಮಾಡಿದ್ದಾರೆ. ಇನ್ನು ಮರಳಿ ಶಾಲೆಗೆ ಬರುತ್ತಿರುವ ಮಕ್ಕಳ ಬರುವಿಕೆ ಜಿಲ್ಲಾಡಳಿತ ಹಾಗೂ ಎಲ್ಲಾ ಶಾಲಾ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡು ಮಕ್ಕಳನ್ನು ಬರಮಾಡಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿದ ಡಿಡಿಪಿಐ ಮೋಹನ್ ಹಂಚಾಟೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶೇ.50 ರಷ್ಟು ಮಾತ್ರ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.

ಅದೇ ರೀತಿ ಮಕ್ಕಳು ಸಹ ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

25/10/2021 12:07 pm

Cinque Terre

21.46 K

Cinque Terre

0

ಸಂಬಂಧಿತ ಸುದ್ದಿ