ಪಬ್ಲಿಕ್ ನೆಕ್ಸ್ಟ್ ವಿಶೇಷ ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಬಂದಿದ್ದೆ ಬಂದಿದ್ದು, ಮಕ್ಕಳ ಶಿಕ್ಷಣಕ್ಕೆ ಹೊಡೆತ ಕೊಟ್ಟಿದ್ದು ಮಾತ್ರವಲ್ಲದೆ ಮಕ್ಕಳ ಕಣ್ಣಿನ ಆರೋಗ್ಯದ ಮೇಲೆಯೂ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಆಫ್ ಲೈನ್ ಕ್ಲಾಸ್ ಬಂದ ಆಗಿದ್ದು, ಆನ್ ಲೈನ್ ಕ್ಲಾಸ್ ಮೂಲಕ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಆನ್ ಕ್ಲಾಸ್ ನಿಂದಲೇ ಸಾಕಷ್ಟು ಮಕ್ಕಳು ಅಂಧತ್ವಕ್ಕೆ ಒಳಗಾಗಿದ್ದಾರೆ.
ಮೊದಲು ಶಾಲೆಯಲ್ಲಿ ಆಟ ಪಾಠದಲ್ಲಿ ಆರೋಗ್ಯವಾಗಿರುತ್ತಿದ್ದ ಮಕ್ಕಳು ಕಿಲ್ಲರ್ ಕೊರೋನಾ ಹಾವಳಿಯ ಆತಂಕದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಂದ ಕಣ್ಣಿನ ತೊಂದರೆಗೆ ಒಳಗಾಗುತ್ತಿದ್ದಾರೆ. ಮೊಬೈಲ್ ಮೂಲಕ ಆನ್ ಲೈನ್ ಕ್ಲಾಸ್ ಕೇಳುತ್ತಿರುವ ಮಕ್ಕಳು ಮೊಬೈಲ್ ಬಳಕೆಯಿಂದ ದೃಷ್ಟಿ ದೋಷಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೇ ರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ ಅಂಧತ್ವದಲ್ಲಿ ತುಂಬಾ ಹಿಂದೆ ಇದ್ದ ಕರ್ನಾಟಕ ಈಗ ಅಂಧತ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದ್ದರೇ ನಾಲ್ಕನೇ ಸ್ಥಾನ ಕರ್ನಾಟಕ ಇರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮಕ್ಕಳು ಆನ್ ಲೈನ್ ತರಗತಿಯ ನಂತರವೂ ಮೊಬೈಲ್ ಬಳಕೆಯಿಂದ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ.
ಇನ್ನೂ 6 ರಿಂದ 13 ವರ್ಷದಲ್ಲಿಯೇ ಮಕ್ಕಳಿಗೆ ಕಣ್ಣಿನ ಬೆಳವಣಿಗೆ ವೇಗವಾಗಿರುತ್ತದೆ. ಇಂತಹ ಸಮಯದಲ್ಲಿ ಮಕ್ಕಳು ಆನ್ ಲೈನ್ ಕ್ಲಾಸ್ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ದೋಷವನ್ನು ಅನುಭವಿಸಿದ್ದಾರೆ. ಅಲ್ಲದೇ ಈ ಆನ್ ಲೈನ್ ಕ್ಲಾಸ್ ಮೂಲಕವೇ ಸುಮಾರು 20% ವಿದ್ಯಾರ್ಥಿಗಳು ದೃಷ್ಟಿ ದೋಷಗಳಿಗೆ ಒಳಗಾಗಿರುವುದು ಪಾಲಕರಲ್ಲಿ ಆತಂಕವನ್ನುಂಟು ಮಾಡಿದೆ. ಅಂಗಳದಲ್ಲಿ ಆಡುತ್ತ ಬೆಳೆಯುತ್ತಿದ್ದ ಮಕ್ಕಳು ಅಂಗೈಯಲ್ಲಿನ ಮೊಬೈಲ್ ನಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ಸಮಸ್ಯೆಗೆ ಪಾಲಕರು ಆತಂಕಗೊಂಡಿದ್ದು, ಒಂದು ಕಡೆಗೆ ಮಕ್ಕಳ ಶಿಕ್ಷಣದ ಚಿಂತೆಯಾದರೇ ಮತ್ತೊಂದೆಡೆ ಮಕ್ಕಳ ಆರೋಗ್ಯದ ಚಿಂತೆಯಾಗಿದ್ದು,ಆನ್ ಲೈನ್ ಕ್ಲಾಸಿನಿಂದಲೇ ಅಂಧತ್ವಕ್ಕೆ ಒಳಗಾಗಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
13/10/2021 05:47 pm