ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾಸ್ಕ್ ಹಾಕದೇ ಬರ್ತೀರಾ.. ಹಾಗಾದ್ರೆ ಬನ್ನಿ ಕೋವಿಡ್ ಬಸ್ ನಿಮಗಾಗಿ ಕಾಯ್ತಾ ಇದೆ..

ಧಾರವಾಡ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹಬ್ಬುತ್ತಲೇ ಇದೆ. ಕೊರೊನಾ ಸಾಮಾನ್ಯ ನೆಗಡಿ, ಕೆಮ್ಮು ಎಂದು ಜನ ತಿಳಿದುಕೊಳ್ಳುತ್ತಿದ್ದಾರೆ. ಆದರೆ, ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇದಕ್ಕಾಗಿಯೇ ಜಿಲ್ಲಾಡಳಿತ ಆ್ಯಂಟಿಜನ್ ಟೆಸ್ಟ್ ಮಾಡುವ ಬಸ್ಸನ್ನು ಮತ್ತೆ ರಸ್ತೆಗೆ ಇಳಿಸಿದೆ.

ಧಾರವಾಡದ ಮಾರುಕಟ್ಟೆ ಹಾಗೂ ಜನಸಂದಣಿ ಇರುವ ಕಡೆಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ಬಸ್ಸನ್ನು ನಿಲ್ಲಿಸಲಾಗಿದ್ದು, ಸ್ವತಃ ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರೇ ಮಾಸ್ಕ್ ಹಾಕದೇ ಬರುವ ಸಾರ್ವಜನಿಕರನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಮಾಸ್ಕ್ ಹಾಕದೇ ಬರುವ ಸಾರ್ವಜನಿರಿಗೆ ದಂಡ ಹಾಕುವಂತೆ ಈಗಾಗಲೇ ನಿರ್ದೇಶನ ಇದ್ದು, ಪೊಲೀಸರು ಕೂಡ ಮಾಸ್ಕ್ ಹಾಕದೇ ಇರುವವರಿಗೆ 100 ರೂಪಾಯಿ ದಂಡ ಹಾಕುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/09/2020 03:08 pm

Cinque Terre

47.16 K

Cinque Terre

9

ಸಂಬಂಧಿತ ಸುದ್ದಿ