ನವಲಗುಂದ : ಗುರುವಂದನ ಸ್ವಾಗತ ಸಮಿತಿ ನವಲಗುಂದ ಹಾಗೂ ಮಾಡಲ್ ಹೈಸ್ಕೂಲ್ ನವಲಗುಂದ ಇವರ ಸಂಯುಕ್ತ ಆಶ್ರಯದಲ್ಲಿ ನವಲಗುಂದ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ಮಾದರಿ ಕೇಂದ್ರ ಗಂಡು ಮಕ್ಕಳ ಶಾಲೆ ನಂ-1 ರಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇನ್ನು ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸುಮಾರು 48 ಫಲಾನುಭವಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತು. ನಂತರ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಹುಬ್ಬಳ್ಳಿಯ ಎಂ.ಎಂ ಜೋಶಿ ಕಣ್ಣಿನ ವೈದ್ಯರಿಂದ ಕೃತಕ ಮಸೂರವನ್ನು ಅಳವಡಿಸಿ, ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಗಿರೀಶ ದಾನಪ್ಪಾಗೌಡ್ರ, ಗಂಗಾಧರ ಮಟಿಗಾರ, ಖಾಜೇಸಾಬ ಹುಗ್ಗಿ, ನಿಂಗಪ್ಪ ಬಾಗಣ್ಣವರ, ಭೀಮಸಿ ಗುಳೇದ, ಬಾಳೇಶ ಯಳಮಲಿ, ಶಿವಾನಂದ ಉಪ್ಪಿನ, ನಾರಾಯಣ ರಾಯಕರ, ಬಸವರಾಜ ಶಲವಡಿ, ನಿಂಗಪ್ಪ ಸಂಗಟಿ, ಮಹಬೂಬಸಾಬ ದೋಬಿ, ದಶರಥ ಕಲಾಲ, ಮಲ್ಲು ಹೊಳೆಯಣ್ಣವರ ಇದ್ದರು.
Kshetra Samachara
27/05/2022 02:55 pm