ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 160 ಜನ ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಣೆ: ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿಯವರಿಗೆ 45ರ ಸಂಭ್ರಮ...!

ಹುಬ್ಬಳ್ಳಿ: ಜನ್ಮದಿನ ಆಚರಣೆ ಅಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಹಾರ ಹಾಕಿ ಅದ್ದೂರಿಯಾಗಿ ಸಂಭ್ರಮಿಸುವುದು ಅಂದುಕೊಂಡಿರುವ ಜನರ ಮಧ್ಯೆ ಜನ್ಮದಿನ ಆಚರಣೆಯಲ್ಲಿ ಸಾಮಾಜಿಕ ಸಂದೇಶವನ್ನು ಸಹೋದರರು ಎತ್ತಿ ತೋರಿದ್ದಾರೆ.

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ಉದ್ಯಮಿಗಳಾದ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರ 45ನೇ ಜನ್ಮದಿನದ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಸಭಾಭವನದಲ್ಲಿ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರ ಅಭಿಮಾನಿಗಳು ಸುಮಾರು 160ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ ಮಾಡಿದ್ದಾರೆ.

ಇನ್ನೂ ರಾಷ್ಟ್ರೋತ್ಥಾನ ರಕ್ತ ನಿಧಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು,ಇಲ್ಲಿ ನೂರಾರು ಯುವಕರು ಅಭಿಮಾನದಿಂದ ರಕ್ತದಾನ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಅಲ್ಲದೆ ಜನ್ಮದಿನ ಆಚರಣೆ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಸನ್ಮಾನಿಸಿ ಗೌರವಿಸಲಾಗಿದ್ದು, ಮಂಗಳಮುಖಿಯವರು ಕೂಡ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಹೋದರರಿಗೆ ಶುಭಾಶಯ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

29/08/2021 03:46 pm

Cinque Terre

74.4 K

Cinque Terre

5

ಸಂಬಂಧಿತ ಸುದ್ದಿ