ಕುಂದಗೋಳ : ಮಕ್ಕಳು ಹಾಗೂ ಗರ್ಭಿಣಿಯರ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪ್ರಸಾರ ಸೇರಿದಂತೆ ಅವರ ಆರೋಗ್ಯದ ಬಗ್ಗೆ ಇಂದು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ ದೇಶದ ಅಪೌಷ್ಟಿಕತೆ ಪ್ರಮಾಣ ಇಳಿಕೆಯಾಗಿದೆ ನಾವು ಅಂಗನವಾಡಿ ಕಾರ್ಯಕರ್ತೆಯರ ಈ ಕಾರ್ಯ ಮೆಚ್ಚಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯ ಉಮೇಶ ಹೆಬಸೂರ ಹೇಳಿದರು.
ಅವರು ತಾಲೂಕಿನ ಕಡಪಟ್ಟಿ ಗ್ರಾಮದ ಅಂಗನವಾಡಿಯಲ್ಲಿ ನಡೆದ ರಾಷ್ಟ್ರೀಯ ಪೋಷಣಾ ಅಭಿಮಾನ ಯೋಜನೆ ಅಡಿಯ ಪೌಷ್ಟಿಕ ಆಹಾರ ಶಿಬಿರ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಡಿಪಿಓ ಅನ್ನಪೂರ್ಣ ಸಂಗಳದ ಮಾತನಾಡಿ ಗರ್ಭಿಣಿ ಬಾಣಂತಿಯರಿಗೆ ಹಾಗೂ ಚಿಕ್ಕ ಮಕ್ಕಳ ಆರೋಗ್ಯ ಕುರಿತಂತೆ ಕೈಗೊಳ್ಳಬೇಕಾದ ಅವಶ್ಯ ಆರೋಗ್ಯ ಚಟುವಟಿಕೆಗಳು ಕುರಿತು ತಿಳಿಸಿದರು. ಇದೇ ವೇಳೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಮಮತಾ ಅವರಿಗೆ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ನಿರ್ಗಮಿತ ಅಧ್ಯಕ್ಷ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕರ ಭಾಗವಹಿಸಿದ್ದರು.
Kshetra Samachara
18/09/2020 01:24 pm