ಹುಬ್ಬಳ್ಳಿ: ಜಿಲ್ಲೆಯ ಧಾರವಾಡ ಡಿಸ್ಟ್ರಿಕ್ಟ್ ಸೆಂಟರ್ ಆಫ್ ಲರ್ನಿಂಗ್ ಆ್ಯಂಡ್ ಕೋವಿಡ್ ಸೇಫ್ಟಿ ಸೊಲ್ಯೂಷನ್ ಸಂಸ್ಥೆಯು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಇವಾಲ್ವ ಫೌಂಡೇಷನ್ ಸಹಯೋಗದಲ್ಲಿ ಸ್ವಯಂ ಸೇವಕರು ಅವಳಿನಗರದ ವಿವಿಧೆಡೆ ಕೋವಿಡ್-19 ನಿಯಂತ್ರಣಕ್ಕಾಗಿ ಪ್ಲಾಸ್ಮಾ ದಾನ ಜಾಗೃತಿ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಪ್ಲಾಸ್ಮಾ ದಾನದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಮತ್ತು ಪ್ರೋತ್ಸಾಹಿಸುವ ಕರಪತ್ರಗಳು ಹಾಗೂ ಭಿತ್ತಿ ಪತ್ರಗಳನ್ನು ವಿತರಿಸಲಾಯಿತು. ಸಾರ್ವಜನಿಕರ ಸಂದೇಹಗಳಿಗೆ ಉತ್ತರಿಸಲಾಯಿತು. ಕಿಮ್ಸ್ ಪ್ಲಾಸ್ಮಾ ಸಹಾಯವಾಣಿ ಸಂಖ್ಯೆ 9448733130,8277800682 ಸಂಪರ್ಕಿಸಲು ತಿಳಿಸಲಾಯಿತು.
Kshetra Samachara
15/10/2020 07:39 pm