ಕಲಘಟಗಿ: ಕಲಘಟಗಿ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಾರ್ವತಿ ನಾನಪ್ಪ ಲಮಾಣಿ ಎಂಬ ಗರ್ಭಿಣಿ ಮೃತಪಟ್ಟಿದ್ದಾಳೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಲಘಟಗಿ ತಾಲೂಕಿನ ಶಿಗಿಗಟ್ಟಿ ತಾಂಡಾದಲ್ಲಿ ವಾಸಿಸುತ್ತಿರುವ ಪಾರ್ವತಿ ಲಮಾಣಿ ಶನಿವಾರ ರಾತ್ರಿ 1ಗಂಟೆಯಿಂದ ಅಂಬುಲೇನ್ಸ ಗೆ ಕರೆ ಮಾಡಿದ್ದಾರೆ ಕರೆ ಮಾಡಿದ ನಂತರ ತಡವಾಗಿ ಬಂದ ಅಂಬುಲೆನ್ಸ್‌ನಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ದಾಖಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ. ಅಲ್ಲಾಬಕ್ಷ ಯಾದವಾಡ ಅವರು ಗರ್ಭಿಣಿಗೆ ಚಿಕಿತ್ಸೆ ನೀಡಲು ಎರಡು ಗಂಟೆ ವಿಳಂಬ ಮಾಡಿದ್ದಾರೆ. ಇದೇ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಆರೋಪಿಸಿದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಎಂ ನಿಂಬಣ್ಣವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಸಾವನ್ನಪ್ಪಿದ ಮಹಿಳೆಯ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಈ ಪ್ರತಿಭಟನೆಯು ಸಾಯಂಕಾಲದವರೆಗೂ ಮುಂದುವರೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಕಲಘಟಗಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹಾಗೂ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಘಟನೆ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
Kshetra Samachara
30/05/2022 09:54 am