ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕಿಮ್ಸ್ ನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ. ಆದರೆ, ತಾನೇ ಹೆತ್ತ ಕಂದನಿಗೆ ಹೆತ್ತ ತಾಯಿಯೇ ವಿಲನ್ ಆಗಿರುವ ಸ್ಟೋರಿ ಇಲ್ಲಿದೆ ನೋಡಿ...
ಹೌದು... ಕಳೆದ ಸೋಮವಾರ ಯಾರೋ ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆಂದು ತಾಯಿ ಸಲ್ಮಾ ಶೇಖ್ ಠಾಣೆಗೆ ದೂರು ನೀಡಿದ್ದಳು. ಆದರೆ, ಮಂಗಳವಾರ ಮುಂಜಾನೆ ಕಿಮ್ಸ್ ಹಿಂಭಾಗದಲ್ಲಿ ಪತ್ತೆಯಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ಮಗು ಕಳ್ಳತನದ ಅಸಲಿಯತ್ತು ಬಯಲಾಗಿದ್ದು, ಅನಾರೋಗ್ಯ ಹೊಂದಿದ್ದ ಮಗುವನ್ನು ತಾಯಿಯೇ ಎಸೆದಿದ್ದು ಬೆಳಕಿಗೆ ಬಂದಿದೆ.
ಶೌಚಾಲಯಕ್ಕೆ ಬರುವ ನೆಪದಲ್ಲಿ ಮಗುವನ್ನು ತಾಯಿ ಎಸೆದು ಡ್ರಾಮಾ ಮಾಡಿದ್ದಳು. ಈ ವಿಲನ್ ತಾಯಿಯು ಮಾಡಿದ್ದ ನಾಟಕವನ್ನು ಅವಳಿನಗರದ ಪೊಲೀಸರು ಬಯಲು ಮಾಡಿದ್ದಾರೆ. ಕಿಮ್ಸ್ ಸಿಸಿ ಟಿವಿಯಲ್ಲಿ ತಾಯಿ ಸಲ್ಮಾ ಮಗು ಎಸೆದಿರುವುದು ಬೆಳಕಿಗೆ ಬಂದಿದೆ.
ತನಗೆ ಹುಟ್ಟಿದ ಮಗುವಿನ ತಲೆ ಅತಿಯಾಗಿ ದೊಡ್ಡದಿದ್ದು, ಅದನ್ನು ತಾನೇ 103 ವಾರ್ಡಿನ ಶೌಚಾಲಯದ ಪಕ್ಕದ ಕಿಟಕಿಯಿಂದ ಹೊರಗೆ ಒಗೆದಿದ್ದಾಳೆ. ಅದೃಷ್ಟವಶಾತ್ ಮಗು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ತನ್ನದೇ ಕರುಳು ಬಳ್ಳಿಯನ್ನು ಕೊಲೆ ಮಾಡಲು ಯತ್ನಿಸಿದಳಾ ತಾಯಿ!? ಎಂಬುವಂತ ಅನುಮಾನ ಹುಟ್ಟಿದೆ.
ಒಟ್ಟಿನಲ್ಲಿ ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿರುವಳೆನ್ನಲಾದ ರಕ್ಕಸಿ ತಾಯಿಯ ಅಸಲಿಯತ್ತು ಬಯಲಾಗಿದ್ದು, ತಾನು ಹೆತ್ತ ಮಗುವಿಗೆ ತಾನೇ ವಿಲನ್ ಆಗಿರುವ ಘಟನೆಯೊಂದು ನಡೆದಿದ್ದು, ಜೀವ ಕೊಟ್ಟವಳು ಜೀವ ತೆಗೆಯಲು ಮುಂದಾಗಿರುವುದು ನಿಜಕ್ಕೂ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/06/2022 10:43 am