ಹುಬ್ಬಳ್ಳಿ: ಧಾರವಾಡ ಟಾಕೀಸ್ ನಲ್ಲಿ ವಿನೂತನ ಕಿರುಚಿತ್ರವೊಂದು ಬಿಡುಗಡೆಯಾಗಿದ್ದು, ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವವರಿಗೆ ತಕ್ಕ ಪಾಠ ಎಂಬುವಂತ ಕಿರುಚಿತ್ರ ಮೂಡಿ ಬಂದಿದೆ.
ಹೌದು.. ಕಿಶೋರ್ ಬಜಾಜ್ ನಿರ್ದೇಶನದ ಕೊರೋನಾ ಕಾಟಾ..ಜೀವನದ ಪಾಠ ಎಂಬುವಂತ ಶೀರ್ಷಿಕೆಯಲ್ಲಿ ಮೂಡಿ ಬಂದಿರುವ ಚಿತ್ರ ಮಾಸ್ಕ್ ಧರಿಸದೇ, ಸ್ಯಾನಿಟೈಸರ್ ಬಳಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೊರೋನಾ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೇ ಆಗುವ ದುಷ್ಪರಿಣಾಮದ ಕುರಿತಾದ ಕಥಾಹಂದಿರದಲ್ಲಿ ಈ ಕಿರುಚಿತ್ರ ಮೂಡಿಬಂದಿದೆ.
ಕಿಶೋರ್ ಬಜಾಜ್ ಅವರ ಕಚೇರಿಯಲ್ಲಿಯೇ ಚಿತ್ರಿಕರೀಸಿರುವ ಚಿತ್ರ ನಿಜಕ್ಕೂ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುವ ಚಿತ್ರ ಇದಾಗಿದೆ.
ಚಿತ್ರದಲ್ಲಿ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ನಿಷ್ಕಾಳಜಿ ಹಾಗೂ ಕೋವಿಡ್ ನಿಯಮ ಉಲ್ಲಂಘನೆಯ ವಿಷಯವನ್ನು ಪ್ರಧಾನವಾಗಿ ಇಟ್ಟುಕೊಂಡು ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಉತ್ತಮ ಸಂದೇಶವನ್ನು ರವಾನಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿರುವ ಚಿತ್ರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2022 09:26 pm