ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವೈರಸ್ ಹಾಗೂ ಓಮೈಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದರೂ ಕೂಡ ಸಿನಿಮಾ ಥಿಯೇಟರ್ ಪ್ರೇಕ್ಷಕರು ಇಲ್ಲದೆ ಖಾಲಿ ಇದ್ದ ದೃಶ್ಯಗಳು ಇಂದು ಹುಬ್ಬಳ್ಳಿಯಲ್ಲಿ ಕಂಡು ಬಂದವು.
ಹೌದು.. ಹುಬ್ಬಳ್ಳಿಯಲ್ಲಿ ಸಾಮಾನ್ಯವಾಗಿ ವೀಕೆಂಡ್ ಬಂದರೆ ಸಿನಿಮಾ ಥಿಯೇಟರ್ ತುಂಬಿರುತಿತ್ತು ಆದರೆ ಇಂದು ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದರು ಕೆಲವೇ ಪ್ರೇಕ್ಷಕರು ಇದ್ದ ದೃಶ್ಯಗಳು ಸಿನಿಮಾ ಥಿಯೇಟರ್ ಮುಂದೆ ಕಂಡು ಬಂದವು.
ಈ ಕುರಿತು ಮಾತನಾಡ ಸಿನಿಮಾ ಥಿಯೇಟರ್ ಮ್ಯಾನೇಜರ್ ಶಿವಾನಂದ, ನಿನ್ನೆ ಸಂಜೆ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿರುವುದರಿಂದ ಸಾರ್ವಜನಿಕರಿಗೆ ತಿಳಿದಿಲ್ಲ ಆದ್ದರಿಂದ ಮೊದಲನೇ ವಾರ ಆಗಿದ್ದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ ಮುಂದೆ ಸಿನಿಮಾ ಥಿಯೇಟರ್ ಪ್ರೇಕ್ಷಕರ ಬರುವ ನಿರೀಕ್ಷೆ ಇದೆ ಎಂದರು.
ಒಟ್ಟಿನಲ್ಲಿ ಸರ್ಕಾರದ ದಿನಕ್ಕೊಂದು ನಿರ್ಧಾರದಿಂದ ಜನರು ಬೇಸತ್ತು ಹೋಗಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂಬುವುದು ಸಾರ್ವಜನಿಕ ಒತ್ತಾಸೆಯಾಗಿದೆ.
Kshetra Samachara
22/01/2022 07:17 pm