ಧಾರವಾಡ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿದೆ. ನಿತ್ಯ ಐದಾರು ಸಾವಿರ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿತ್ತು. ಶೇ.17ರಿಂದ 20 ರವರೆಗೆ ಪಾಸಿಟಿವಿಟಿ ಇತ್ತು. ಈಗಾಗಲೇ ಸೋಂಕಿತರಿಗೆ ಉಪಚಾರ ನೀಡಲಾಗಿದೆ. ಯಾವ ಸೋಂಕಿತರು ಸೀರಿಯಸ್ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೋವಿಡ್ ಸಭೆ ಬಳಿಕ ಹೇಳಿಕೆ ನೀಡಿದ ಸಚಿವ ಹಾಲಪ್ಪ ಆಚಾರ್, ಜಿಲ್ಲೆಯಲ್ಲಿ ಡೆತ್ ರೇಟ್ ಶೇ. 0.04 ಇದೆ. ಇದು ಸಹ ತೀರಾ ಕಡಿಮೆ ಇದೆ. ಬಹಳಷ್ಟು ಜನ ಹೋಮ್ ಐಸೋಲೇಷನ್‌ನಲ್ಲಿದಾರೆ. ಕೋವಿಡ್ ಕಡಿಮೆಯಾಗುವ ನಿರೀಕ್ಷೆ ಮಾಡುತ್ತಿದ್ದೇವೆ. ಕಡಿಮೆಯಾಗಲಿ ಎಂದು ಬಯಸುತ್ತೇನೆ. ಜಾತ್ರೆ, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಕೇಸ್ ಹೆಚ್ಚಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೂ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
Kshetra Samachara
26/01/2022 02:09 pm