ಕುಂದಗೋಳ : ಎಲ್ಲೇಡೆ ಕೊರೊನಾ ಮೂರನೇ ಅಲೆ ತೀವ್ರತೆ ಜೋರಾಗಿದ್ರೂ, ಈ ಕುಂದಗೋಳ ಸಾರಿಗೆ ಬಸ್ ಹಾಗೂ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಆ ನಿಯಮ ಮಾಯವಾಗಿದೆ.
ಈ ಸಾರಿಗೆ ಬಸ್ ಅಧಿಕಾರಿಗಳು ಮಾತ್ರ ಕೊರೊನಾ ನಿಯಮ ಮೀರಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ, ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣ ಮಾಡೋ ಸಾರಿಗೆ ಬಸ್ ಸ್ವತಃ ಕಂಡಕ್ಟರ್ ಟಿಕೆಟ್ ಮಾಡಲು ಜಾಗವಿರದಂತೆ ಪುಲ್ ಆಗಿ ಬಿಟ್ಟಿರುತ್ತದೆ, ಇದು ಒಂದು ಕಡೆ ಕೊರೊನಾ ರೋಗಕ್ಕೆ ಕಾರಣ ಅಲ್ವಾ ? ಎಂಬುದು ಅದೆಷ್ಟೋ ವಿಧ್ಯಾರ್ಥಿಗಳ ಪ್ರಶ್ನೆಯಾಗಿದೆ.
ಈ ಮೊದಲು ಕೊರೊನಾ ಒಂದು ಮತ್ತು ಎರಡನೇ ಅಲೆ ಸಂದರ್ಭ ಸಾಮಾಜಿಕ ಅಂತರ್, ಮಾಸ್ಕ್ ಹಾಗೂ ಅರ್ಧ ಜನ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಾರಿಗೆ ಬಸ್ ಈಗ ಆ ಎಲ್ಲಾ ನಿಯಮ ಮೀರಿ ಕೊರೊನಾಕೆ ಆಹ್ವಾನ ನೀಡ್ತಾ ಇವೆ.
ಒಟ್ಟಾರೆ ಕೋವಿಡ್ ಹತೋಟಿಗೆ ಎನೆಲ್ಲಾ ಕ್ರಮ ಜರುಗಿಸುವ ಜಿಲ್ಲಾಡಳಿತ ಈ ಸಾರಿಗೆ ಬಸ್'ಗಳನ್ನ ಒಮ್ಮೆ ಗಮನಿಸಬೇಕಿದೆ.
Kshetra Samachara
25/01/2022 08:48 pm