ಧಾರವಾಡ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಎರಡು ಅಲೆಯಲ್ಲಿ ರೋಗಿಗಳು ಅನುಭವಿಸಿದ ತೊಂದರೆಯನ್ನು ಮತ್ತೆ ಅನುಭವಿಸಬಾರದು ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ವಿನೂತನ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ ಅದು ಏನು ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ಕೊರೊನಾ ಸೋಂಕಿತರ ಸೇವೆಗೆ ಸಜ್ಜಾಗಿ ನಿಂತಿರುವ ವಾಹನಗಳು, ವಾಹನದಲ್ಲಿ ಇಟ್ಟುಕೊಳ್ಳಲಾಗಿರುವ ಮೆಡಿಸಿನ್ ಕಿಟ್‌ಗಳು, ಅಷ್ಟಕ್ಕೂ ಇವೆಲ್ಲ ವಾಹನಗಳು ಎಲ್ಲಿ ಹೋಗುತ್ತಿವೆ ಅಂತ ಅಂದುಕ್ಕೊಂಡ್ರಾ?...ಎಸ್ ಈ ವಾಹನಗಳು ಹೋಗ್ತಾ ಇರೋದು ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳ ಮನೆ ಬಾಗಿಲಿಗೆ. ಸೋಂಕಿತರ ಮನೆ ಬಾಗಿಲಿಗೆ ಔಷಧಿಯನ್ನು ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಆರ್. ಗೋಪಾಲಕೃಷ್ಣ ಅವರು ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿ, ಧಾರವಾಡ ಅವಳಿ ನಗರದಲ್ಲಿ ದಿನೇ ದಿನೇ ಕೊರೊನಾ ಕೇಸ್‌ಗಳು ಹೆಚ್ಚುತ್ತಿವೆ. ಎರಡೂ ಅಲೆಗಿಂತ ಮೂರನೇಯ ಅಲೆಯಲ್ಲಿ ಶೇ.90 ರಷ್ಟು ಜನರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಅವರೆಲ್ಲರಿಗೂ ಮನೆ ಮನೆಗೆ ಔಷಧಿ ಕಿಟ್ ಕೊಡಲು ಅವಳಿನಗರದ 12 ಝೋನಲ್ ಕಚೇರಿಯಲ್ಲಿ ಪ್ರತಿ ಝೋನಲ್‌ಗೆ ಎರಡು ವಾಹನದಂತೆ 25 ವಾಹನಗಳನ್ನು ಪಡೆದುಕೊಂಡು ಒಂದು ವಾಹನದಲ್ಲಿ ಮೂರು ಸಿಬ್ಬಂದಿಯನ್ನು ನೇಮಕ ಮಾಡಿ ಯಾರೇ ಕೋವಿಡ್ ರೋಗಿಗಳು 0836-2213803, 08362213806 ಹಾಗೂ 9141051611 ಈ ನಂಬರ್‌ಗೆ ಕರೆ ಮಾಡಿ ತಿಳಿಸಿದರೆ ಸಾಕು ಸಿಬ್ಬಂದಿ ಉಚಿತವಾಗಿ ಅವರ ಮನೆ ಬಾಗಿಲಿಗೆ ಔಷಧಿ ವಿತರಣೆ ಮಾಡುತ್ತಾರೆ.
ಒಟ್ಟಾರೆಯಾಗಿ ಅವಳಿ ನಗರದಲ್ಲಿ ಕೋವಿಡ್ ಸೋಂಕಿತರು ಸಹಾಯವಾಣಿಗೆ ಕರೆ ಮಾಡಿ ಮನೆ ಬಾಗಿಲಿಗೆ ಕೋವಿಡ್ ಕಿಟ್ ಬರುವಂತೆ ಮಾಡಿರುವ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಲೇಬೇಕಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
24/01/2022 10:57 am