ಕುಂದಗೋಳ : ಕೊರೊನಾ ವೈರಸ್ ಮೂರನೇ ಅಲೆ ತೀವ್ರತೆ ದಿನೇ ದಿನೇ ವ್ಯಾಪಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹರಡುತ್ತಿದ್ದು ಎಲ್ಲ ರೋಗಿಗಳಲ್ಲೂ ನೆಗಡಿ, ಕೆಮ್ಮು, ಜ್ವರ, ತಲೆನೋವು, ಮೈ ಕೈ ನೋವಿನಂತಹ ಸಾಮಾನ್ಯ ಲಕ್ಷಣಗಳು ಹೆಚ್ಚಾಗಿವೆ. ಉಸಿರಾಟದ ತೊಂದರೆ ಕಂಡು ಬಂದಿಲ್ಲಾ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹ ಕಡಿಮೆ ಇದೆ.
ಇಂದು ಕುಂದಗೋಳ ಪಟ್ಟಣದ ಕೋರ್ಟ್ 4 ಜನ ಸಿಬ್ಬಂದಿಗೆ ಕೊರೊನಾ ದೃಡಪಟ್ಟರೇ, ಖಾಸಗಿ ಕಾಲೇಜಿನ 10 ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ, ಇದಲ್ಲದೆ ಎಸ್.ಬಿ.ಎಸ್.ಎಚ್ ಶಾಲೆಯ 5 ಜನ ವಿದ್ಯಾರ್ಥಿಗಳಿಗೆ ಸೋಂಕು ಖಚಿತವಾಗಿದ್ದು, ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ 5 ಜನ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ ಎಲ್ಲೇಡೆ ಸ್ಯಾನಿಟೈಸ್ ಮಾಡುವ ಕಾರ್ಯ ಆರಂಭವಾಗಿದೆ.
ಈಗಾಗಲೇ ಸೋಂಕು ತಗುಲಿದವರನ್ನು ಆರೋಗ್ಯ ಪರೀಕ್ಷೆ ಮಾಡಿಸಿ ಹೋಂ ಐಸುಲೇಷನ್ ಗೆ ಸೂಚಿಸಿ ಹೋಂ ಕ್ವಾರಂಟೈನ್ ವಾಚ್ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆರೋಗ್ಯ ಸುರಕ್ಷಾ ಕಿಟ್ ನೀಡಿ ಸೋಂಕಿತರ ಜಾಗೃತಿಗೆ ಮುಂದಾಗಿದ್ದಾರೆ.
ಒಟ್ಟಾರೆಯಾಗಿ ಕುಂದಗೋಳ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ಕಂಡು ಬಂದರೇ ಮೊದಲಿನ 75 ಪ್ರಕರಣ ಸೇರಿ ಒಟ್ಟು 132 ಸೋಂಕಿತರು ಹೋಂ ಐಸುಲೇಷನ್ ಗೆ ಒಳಗಾಗಿದ್ದಾರೆ.
Kshetra Samachara
19/01/2022 06:41 pm