ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೋವಿಡ್ ಸೋಂಕಿತರಿಗೆ 'ಇ-ಸಂಜೀವಿನಿ' ಟೆಲಿಮೆಡಿಸಿನ್ ಸೇವೆ

ಧಾರವಾಡ: ಧಾರವಾಡ ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ ಮೂಲಕ ಟೆಲಿಮೆಡಿಸಿನ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಮನೆಯಲ್ಲಿ ಹಾಗೂ ಕ್ವಾರೆಂಟೈನ್‌ನಲ್ಲಿ ಇರುವ ಸೋಂಕಿತರು ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ (OPD) ಮೂಲಕ ಟೆಲಿಕನ್ಸ್‌ಲ್ಟೇಷನ್ ಸೇವೆಗಳ ಲಾಭ ಪಡೆದುಕೊಳ್ಳಬಹುದು. ಅದಕ್ಕಾಗಿ ತ್ವರಿತ ಮಾರ್ಗದರ್ಶಿ ಹಾಗೂ ಎಲ್ಲಾ ಸೇವೆಗಳ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.

ಟೆಲಿಮೆಡಿಸಿನ್ ಕಾರ್ಯನಿರ್ವಹಿಸುವ ವಿಧಾನ: ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್‌ನಿಂದ ಇ-ಸಂಜೀವಿನಿ ಓಪಿಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಣಿ ಮತ್ತು ಟೋಕನ್ ಜನರೇಷನ್ ಮಾಡಬೇಕು. ಬಳಿಕ ಓಟಿಪಿ ಬಳಸಿಕೊಂಡು ನಿಮ್ಮ (ಸೋಂಕಿತರು) ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು. ಇ-ಸಂಜೀವಿನಿಯಲ್ಲಿ ರೋಗಿಯ ನೋಂದಣಿಯ ಫಾರ್ಮನ್ನು ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಬರುವ ಎಸ್‍ಎಂಎಸ್‌ನಲ್ಲಿ ರೋಗಿ ಐಡಿ ಮತ್ತು ಟೋಕನ್ ಅನ್ನು ಸ್ವೀಕರಿಸಬೇಕು.

ಲಾಗಿನ್ ಮಾಡುವುದು:

ರೋಗಿಯ ಐಡಿಯೊಂದಿಗೆ ಲಾಗಿನ್ ಆಗಬೇಕು. ವರ್ಚುವಲ್ ಕರೆ ಬಟನ್ ಒತ್ತಿದಾಗ ಸಕ್ರೀಯಗೊಳಿಸಲಾಗುತ್ತದೆ. ಆಗ ರೋಗಿಯು ವಿಡಿಯೋ ಕರೆಯನ್ನು ಪ್ರಾರಂಭಿಸಿಬಹುದು.

ವಿಡಿಯೋ ಕರೆ: ವಿಡಿಯೋ ಕರೆ ಮಾಡಿದಾಗ ರೋಗಿಯು ವೈದ್ಯರನ್ನು ಸಂಪರ್ಕಿಸಿ, ಅವರಿಂದ ತಕ್ಷಣ ಇ-ಪ್ರಿಸ್ಕ್ರಿಪ್ಷನ್, ಆನ್‌ಲೈನ್ ಓಪಿಡಿ, ರಿಯಲ್ ಟೈಮ್ ಟೆಲಿಮೆಡಿಸನ್ ಹಾಗೂ ರಾಜ್ಯ ಸೇವೆಗಳ ವೈದ್ಯರಿಂದ ಅಗತ್ಯ ಮಾಹಿತಿ ಪಡೆಯಬಹುದು. ವಿಡಿಯೋ ಸಮಾಲೋಚನೆಗಳು, ಚಾಟ್‍ ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆ ಜರುಗಿಸಬಹುದು. ವಿಡಿಯೋ ಕರೆ ಮಾಡಿದಾಗ ರೋಗಿಯು ರಾಜ್ಯ ಸೇವೆಗಳ ವೈದ್ಯರಲ್ಲಿ ತಮ್ಮ ಖಾಯಿಲೆಯ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ, ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆಯನ್ನು ಪಡೆದು ನಂತರ ಬರುವ ಇ-ಪ್ರಿಸ್ಕ್ರಿಪ್ಷನ್ (ePrescription) ಅನ್ನು ಡೌನ್‌ಲೋಡ್ ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಳ್ಳಬಹುದು.

ಇ-ಸಂಜೀವಿಗಾಗಿ ಸಹಾಯವಾಣಿ ಸಂಖ್ಯೆ + 91-11-23978046, ಟೋಲ್ ಫ್ರೀ : 1075, ಸಹಾಯವಾಣಿ ಇ-ಮೇಲ್: ncov2019@gov.in, ವೆಬ್‍ಸೈಟ್: https://esanjeevaniopd.in/ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

17/01/2022 09:56 pm

Cinque Terre

60.5 K

Cinque Terre

2

ಸಂಬಂಧಿತ ಸುದ್ದಿ