ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೋವಿಡ್'ಗೆ ತುತ್ತಾಗಿ ಮೃತ ಪಟ್ಟ ಕುಟುಂಬದವರಿಗೆ ಪರಿಹಾರ ಚೆಕ್

ಕುಂದಗೋಳ : ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿ ಜೀವ ತೆತ್ತ ವ್ಯಕ್ತಿ ಕುಟುಂಬದವರ ಕಷ್ಟ ಭರಿಸಲು ಅಸಾಧ್ಯವಾದುದು ಅಂತಹವರ ಕಷ್ಟ ಹಾಗೂ ಆರ್ಥಿಕ ಹೊರೆ ಕಡಿಮೆ ಮಾಡಲು ಘನ ಕರ್ನಾಟಕ ಪರಿಹಾರ ಚೆಕ್ ವಿತರಣೆ ಮಾಡಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಹೌದು ! ಕುಂದಗೋಳ ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಕಾರಣ ಮೃತಪಟ್ಟವರಿಗೆ ನೀಡಲಾದ ಪರಿಹಾರ ಧನದ ಚೆಕ್'ನ್ನು 37 ಕುಟುಂಬದವರಿಗೆ ವಿತರಣೆ ಮಾಡಿ ಮಾತನಾಡಿದ ಅವರು ಕುಟುಂಬದವರನ್ನು ಕಳೆದುಕೊಂಡು ಕಷ್ಟ ನನಗೆ ಗೊತ್ತು, ನಿಮ್ಮ ಆರ್ಥಿಕ ಹೊರೆ ನೀಗಿಸಲು ಈ ಪರಿಹಾರ ಧನದ ಚೆಕ್ ನೀಡಲಾಗುತ್ತಿದೆ ಎಂದರು.

ಈ ವೇಳೆ ಕುಂದಗೋಳ ತಾಲೂಕಿನಲ್ಲಿ ಕೋವಿಡ್ ಕಾರಣ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು, ತಹಶೀಲ್ದಾರ ಅಶೋಕ್ ಶಿಗ್ಗಾಂವಿ, ಆರೋಗ್ಯ ಅಧಿಕಾರಿಗಳು, ತಹಶೀಲ್ದಾರ ಕಚೇರಿ ಆಡಳಿತಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/12/2021 05:54 pm

Cinque Terre

20.68 K

Cinque Terre

0

ಸಂಬಂಧಿತ ಸುದ್ದಿ