ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ತಮ್ಮ ಸ್ವಂತ ಖರ್ಚಿನಲ್ಲೇ ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕಲು ಮುಂದಾದ ಯುವಕರ ತಂಡ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಕೊರೋನಾದ ಅಟ್ಟಹಾಸ ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ವೈರಸ್ ಒಮ್ರಿಕಾನ್ ಕಾಲಿಡುತ್ತಿರುವುದು ವಾಣಿಜ್ಯ ನಗರದ ಜನಕ್ಕೆ ಭಯವನ್ನು ಹೆಚ್ಚಿಸಿದೆ. ಆದರೆ ಆ ಭಯಕ್ಕೆ ಕಡಿವಾಣ ಹಾಕಲು ಹುಬ್ಬಳ್ಳಿಯ ಯುವಕರ ತಂಡ, ತಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ಮೆನೆ ಮನೆಗೆ ಹೋಗಿ ವ್ಯಾಕ್ಸಿನೇಷನ್‌ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಅಷ್ಟಕ್ಕೂ ಅವರ ಯಾರಿ ಅನ್ನೋದನ್ನಾ ತೋರಸ್ತೇವಿ ನೋಡಿ...

ಹೌದು,,,, ವಾಣಿಜ್ಯ ನಗರಿ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ವ್ಯಾಕ್ಸಿನ್ ತೆಗೆದುಕೊಂಡು, ಸ್ಲಂ ಗಳಿಗೆ ಹೋಗಿ ಲಸಿಕೆ ನೀಡುತ್ತಿರುವ ಮಹತ್ವದ ಕಾರ್ಯದಲ್ಲಿ ತೊಡಗಿರುವವರ ಹೆಸರು ಶ್ರೀಶೈಲ ಅಂಕಲಗಿ, ಮಲ್ಲಿಕಾರ್ಜುನ ಅಂಕಲಗಿ, ಮಂಜುನಾಥ ತರಂಗಿ, ಕೃಷ್ಣ ಗೆಳೆಯರ ಬಳಗ ಇವರು, ಪ್ರತಿ ದಿನಕ್ಕೆ 150 ಕ್ಕೂ ಹೆಚ್ಚು ವ್ಯಾಕ್ಸಿನೇಷನ್‌ ನೀಡಿ ಕೊರೊನಾ ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಇವರು, ಪ್ರಮುಖವಾಗಿ ಸ್ಲಂ ಗಳಿಗೆ ಹೆಚ್ಚು ಒತ್ತುನ್ನು ನೀಡಿರುವುದು, ಎಲ್ಲರೂ ಗಮನ ಸೆಳೆಯುವಂತಹ ಸಂಗತಿ ಯಾಗಿದ್ದು, ಇವರ ಕಾರ್ಯಕ್ಕೆ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಸಹ ಸಾಥ್ ನೀಡಿದ್ದಾರೆ.

ಸುಮಾರು ಹದಿನೈದು ದಿನಗಳಿಂದ ಶ್ರಮಿಸುತ್ತಿರುವ ಇವರ ಕಾರ್ಯವೈಖರಿಗೆ, ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿ ಇವರಿಗೆ ಸಹಕಾರ ನೀಡುತ್ತಿದ್ದಾರೆ. ಮೊದಲಿಗೆ ಇವರ ಈ ಕಾರ್ಯಕ್ಕೆ ತಮ್ಮ ಸ್ವಂತ ಓಮಿನಿ ವಾಹನದ ಮೂಲಕ ಪ್ರಾರಂಭಿಸಿದ ತಂಡ, ಇವರ ಕಾರ್ಯಕ್ಕೆ ಮೆಚ್ಚಿ ಚಿಟ್ಟುಗುಪ್ಪಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ ಅವರು ಜಿಲ್ಲಾಡಳಿತದಿಂದ ಒಂದು ವ್ಯಾಕ್ಸಿನ್ ವ್ಯಾನ್ ನೀಡಿದ್ದಾರೆ. ಈ ವ್ಯಾನ್ ನ ವಿಶೇಷತೆ ಅಂದರೆ ಒಳಗೆ ಕುಡುವ ವ್ಯವಸ್ಥೆ ಇದ್ದು, ರಸ್ತೆಯಲ್ಲಿ ಲಸಿಕೆ ಪಡೆಯುವುದರ ಬದಲು ವಾಹನದ ಒಳಗಡೆ ವ್ಯಾಕ್ಸಿನ್ ಪಡೆಯಬಹುದಾಗಿದೆ.

ಹೀಗೆ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕುತ್ತೀರುವ ಈ ಯುವಕರ ಕಾರ್ಯ ಮೆಚ್ಚಲೇ ಬೇಕಾಗಿರುವ ಸಂಗತಿಯಾಗಿದೆ. ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆದು, ಭಾರತವನ್ನು ಕೊರೊನಾ ಮುಕ್ತ ದೇಶವನ್ನಾಗಿಸಿ.

Edited By : Nagesh Gaonkar
Kshetra Samachara

Kshetra Samachara

14/12/2021 06:24 pm

Cinque Terre

43.79 K

Cinque Terre

14

ಸಂಬಂಧಿತ ಸುದ್ದಿ