ಹುಬ್ಬಳ್ಳಿ : ಊರ ತುಂಬ ಇನ್ನೊಂದು ಕೋವಿಡ್ ಅಲೆ ಬಂದೈತಿ.....ಬಂದೈತಿ... ಅಂತ್ ಹೆದರಾಕತ್ತಾರ್... ಅದರಾಗ್ ಯಾರರೇ.... KMCಗೆ ಬಂದ್ರ ಕೋವಿಡ್ ಹರಡಾಕ್ ಫುಲ್ ವ್ಯವಸ್ಥೆ ಮಾಡದಂಗ್ ಕಾಣತೈತ್ತಿ...
ಯಾಕ್ ಹೀಂಗ್ ಅನ್ನಾಕುಂತ್ತಾರ್ ಅನಬ್ಯಾಡ್ರಿ... ಇಲ್ಲಿ ಕೇಳ್ರೀ.... ಏನ್ ಅಂತಾರ್ ಅಂತ....
ಹ.... ರೀ ಪ್ಪಾ.... ನೀವ್ ಹೇಳದಂಗ್ ಚೀಟಿ ಮಾಡಸುಣ್ ಅಂತ್ ಹೋದ್ರ್ ಅಲ್ಲಿ ಪಾಳೆ ನೋಡ್ರೀ.... ಎಪ್ಪ...ಎಪ್ಪಾ.... ಈ ಡಿಸ್ಟನ್ಸ್ ಇರಲಾರದ ಪಾಳೇನ್ಯಾಗ್ ನಿಂತ್ ಅಕಸ್ಮಾತ್ ಒಂದಿಟ್ಟ ಕೆಮ್ಮಿ ಗಿಮ್ಮಿದ್ರ ಆಜು ಬಾಜು ಅವರಿಗೆ free ಕೋವಿಡ್..... ಬಂದಂಗ್...
ಅಲ್ಲಾ.....ಯಾಕ್ ಇಂತಾ....ಪರಿಸ್ಥಿತಿನ್ಯಾಗ್ ಕೋವಿಡ್ ಟೆಟ್ಟ್‌ಗೆ ಯಾಕ್ ಈ ಚೀಟಿ ಗೀಟಿ ಅಂತ್ .... ಚೀಟಿ ಇಲ್ಲದ್ ನೆಟ್ಟಗ್ ಟೆಸ್ಟ್ ಮಾಡಿದ್ರ್ ಏನ್ ಪ್ರಾಬ್ಲಂ... ಅಂತ್?
ಏನ್ ವ್ಯವಸ್ಥೆನೋ ಏನ್ ಲೆಕ್ಕಾಚಾರ ನೋ..... ಆ ಖುದಾಹೀ ಜಾನೇ......
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
02/12/2021 05:32 pm