ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ಧಾರೂಢ ಮಠದಲ್ಲೂ ಕೊರೊನಾ ಲಸಿಕೆ ಸೆಂಟರ್ ಓಪನ್

ವರದಿ: ರೇವನ್ ಪಿ.ಜೇವೂರ್, ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ: ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಎಸ್್ಡಿಎಎಮ್್ನಲ್ಲಿ ಕೊರೊನಾ ಕೇಸ್ ಪತ್ತೆ ಆಗಿದ್ದೇ ತಡ. ಇಡೀ ಹುಬ್ಬಳ್ಳಿ-ಧಾರವಾಡ ಹೈ ಅಲರ್ಟ್ ಆಗಿದೆ. ಲಸಿಕೆ ಹಾಕೋ ಕಾರ್ಯವೂ ತ್ವರಿತಗೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಞಿಯ ಪ್ರಸಿದ್ದ ಶ್ರೀ ಸಿದ್ಧರೂಢ ಮಠದಲ್ಲೂ ಕೊರೊನಾ ಲಸಿಕೆ ಸೆಂಟರ್ ಓಪನ್ ಆಗಿದೆ.ಮಠದ ಆಡಳಿತ ಮಂಡಳಿ ಅನೌನ್ಸ್ ಮಾಡಿ ಭಕ್ತರಿಗೆ ಲಸಿಗೆ ಹಾಕಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಿದೆ.

ಶ್ರೀ ಸಿದ್ಧಾರೂಢ ಮಠದಲ್ಲಿ ಕಾರ್ತಿಕ ಮಾಸದ ಸಂಭ್ರಮ ಇದೆ.ಭಾನುವಾರ ಬೇರೆ. ಅದಕ್ಕೆ ಭಕ್ತರ ಸಂಖ್ಯೆ ಇಲ್ಲಿ ಇನ್ನೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯಿಂದ ಮಠದ ಆವರಣದಲ್ಲಿ ಲಸಿಕೆ ಹಾಕೋ ವ್ಯವಸ್ಥೆಯನ್ನ ಮಾಡಲಾಗಿದೆ.

ಸಿದ್ಧಾರೂಢ ಮಠಕ್ಕೆ ಬರೋ ಭಕ್ತರಿಗೆ ಇಲ್ಲಿ ನಿನ್ನೆ ಶನಿವಾರದಿಂದ ಬರೋ ಶನಿವಾರದ ವರೆಗೂ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಭಕ್ತರಷ್ಟೇ ಅಲ್ಲ ಹೊರಗಿನ ಜನಕ್ಕೂ ಇಲ್ಲಿ ಲಸಿಕೆ ಹಾಕಲಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

28/11/2021 04:43 pm

Cinque Terre

110.3 K

Cinque Terre

1

ಸಂಬಂಧಿತ ಸುದ್ದಿ