ಕುಂದಗೋಳ : ಜಗತ್ತಿನೆಲ್ಲೇಡೆ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೊನಾ ಹತೋಟಿಗೆ ಸರ್ಕಾರ ರಾಮಬಾಣ ಎಂಬಂತೆ ವ್ಯಾಕ್ಸಿನ್ ನೀಡಿ ಜನರ ಜೀವ ಹಾಗೂ ಆರೋಗ್ಯ ಕಾಪಾಡಿ ನೂರು ಕೋಟಿ ವ್ಯಾಕ್ಸಿನ್ ನೀಡಿದ ಸಾಧನೆ ಮಾಡಿದೆ.
ಹೌದು ! ಈದೀಗ ಸರ್ಕಾರ ಮಾಡಿದ ನೂರು ಕೋಟಿ ವ್ಯಾಕ್ಸಿನ್ ಹಿಂದೆ ಸಂಶಯದ ಗಾಳಿಯೊಂದು ಸುಳಿದಾಡುತ್ತಿದ್ದು, ಕೆಲವರಿಗೆ ಇದೇ ನವೆಂಬರ್ ತಿಂಗಳಲ್ಲಿ ಲಸಿಕೆ ಪಡೆಯದೇ ಇದ್ರೂ, ಪಸ್ಟ್ ಡೋಸ್ ಸಕ್ಸಸ್ ಎಂಬ ಸಂದೇಶದ ಜೊತೆ ಸರ್ಟಿಫಿಕೇಟ್ ಸಹ ಬಂದಿದೆ.
ಇನ್ನೂ ಕೆಲ ವಿದ್ಯಾವಂತ ಯುವಕರ ಸೆಕೆಂಡ್ ಡೋಸ್ ವ್ಯಾಕ್ಸಿನ್ ಕಾಲಮಿತಿ ಮುಗಿಯುವ ಮೊದಲೇ ಸೆಕೆಂಡ್ ಡೋಸ್ ಸಕ್ಸಸ್ ಎಂಬ ಸಂದೇಶಗಳು ಮೂಕರನ್ನಾಗಿಸಿವೆ.
ಇಷ್ಟೇಲ್ಲಾ ಘಟನೆಗಳು ನಡೆದಿದ್ದು ಕುಂದಗೋಳ ತಾಲೂಕಿನ ಯರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯರಗಪ್ಪಿ, ಕಡಪಟ್ಟಿ, ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ವ್ಮಾಕ್ಸಿನ್ ಸಕ್ಸಸ್ ಎಂಬ ಸಂದೇಶಗಳು ಶಾಕ್ ಕೊಟ್ಟಿವೆ.
ಒಟ್ಟಾರೆ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕೆಳ ಹಂತದ ನೌಕರರು ವ್ಯಾಕ್ಸಿನ್ ಪಡೆಯದ ಮತ್ತು ಪಡೆಯಬೇಕಿರುವ ವ್ಯಕ್ತಿಗಳಿಗೂ ನೀಡದೆ ಆಧಾರ್ ಮೊಬೈಲ್ ಸಂಖ್ಯೆ ಪಡೆದು ವ್ಯಾಕ್ಸಿನ್ ಟಾರ್ಗೇಟ್ ತಲುಪುತ್ತಿದ್ದಾರಾ ? ಎಂದು ಜನ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಿಸಬೇಕಿದೆ.
Kshetra Samachara
25/11/2021 06:36 pm