ವರದಿ: ಪಬ್ಲಿಕ್ ನೆಕ್ಸ್ಟ್ ಪ್ರಶಾಂತ ಲೋಕಾಪುರ
ಧಾರವಾಡ :ಕೊರೊನಾ ಸೋಂಕಿನಿಂದ ಪಾರಾಗಲು ಸಹಕಾರಿಯಾಗಿರುವ ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದು,ಇದರ ನಡುವೆ 100 ಕೋಟಿಗೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಮೂಲಕ ಮಹತ್ತರ ಮೈಲುಗಳ ಸಾಧಿಸಿದೆ.ಅದೇ ರೀತಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಪರಿಶ್ರಮದಿಂದ ಧಾರವಾಡ ಜಿಲ್ಲೆಯ ಶೇ.83.14 ರಷ್ಟು ಕೋವಿಡ್ ವ್ಯಾಕ್ಸಿನೇಷನ್ 1ಡೋಸ್ ಕಂಪ್ಲೀಟ್ ಆಗುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಧಾರವಾಡ ಜಿಲ್ಲಾಡಳಿತ ಪ್ರಸ್ತುತ ವರ್ಷ ಜನವರಿಯಿಂದ ಕೋವಿಡ್ ಫ್ರಂಟ್‌ಲೈನ್ಸ ವರ್ಕಸ್ ಗೆ ಲಸಿಕೆ ನೀಡುವ ಮೂಲಕ ಲಸಿಕೆ ಅಭಿಯಾನ ಆರಂಭಿಸಿದೆ.ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 11,94,877 ಜನರಿಗೆ ಮೊದಲ ಡೋಸ್ ಪಡೆದುಕೊಂಡಿದ್ದು,ಅದರಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲು ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಪರಿಣಾಮವಾಗಿ 18 ವರ್ಷ ಮೇಲ್ಪಟ್ಟವರಿಗೆ ಒಟ್ಟು 14,48,116 ಕೋವಿಡ್ ಲಸಿಕೆ ಪಡೆಯಲು ಅರ್ಹರಿದ್ದಾರೆ.ಹಲವಾರು ಬಾರಿ ಜಾಗೃತಿ ಮೂಡಿಸಿದ ನಂತರ ಇದುವರೆಗೆ ಒಟ್ಟು 11,94,877 ಜನ ವ್ಯಾಕ್ಸಿನೇಷನ್ ಹಾಕಿಸಿಕೊಂಡಿದ್ದು,ಎರಡನೇ ಡೋಸ್ ಪಡೆದವರ ಸಂಖ್ಯೆ 5,32,280 ಜನ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಎಸ್ ಎಂ ಹೊನಕೇರಿ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದರು.
Kshetra Samachara
28/10/2021 06:11 pm