ವರದಿ :ಈರಣ್ಣ ವಾಲಿಕಾರ
ಹುಬ್ಬಳ್ಳಿ : ಉತ್ತರ ಕರ್ನಾಟಕ ಬಡವರ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಗಳಿಸಿರುವ ಕಿಮ್ಸ್ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಖಾಸಗಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಸರಿಸಮವಾಗಿ ನಿಂತಿದೆ.
ಕೊರೊನಾ ಸಮಯದಲ್ಲಿ ಕಿಮ್ಸ್ ನೀಡಿದ ಸೇವೆ ವರ್ಣಾತೀತ. ಈಗ ಕೋವಿಡ್ ಎರಡನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ಅನೇಕರ ಜೀವಕ್ಕೆ ಕುತ್ತಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಮ್ಸ್ ವೈದ್ಯರು 76 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಮರು ಜನ್ಮ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಲಕ್ಷಾಂತರ ರೂ ವೆಚ್ಚದ ಈ ಸರ್ಜರಿ, ಕಿಮ್ಸ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ. ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ, ಉತ್ತರ ಕರ್ನಾಟಕದಲ್ಲಿಯೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಈ ಘಟಕ ಇರುವುದು ವಿಶೇಷ.
ಒಟ್ಟಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದರು ಸಹ ಬ್ಲ್ಯಾಕ್ ಪಂಗಸನಿಂದ ಅದೆಷ್ಟೋ ರೋಗಿಗಳು ಗುಣಮುಖರಾಗದೆ, ಮತ್ತೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದೆ ಈಗ ಉತ್ತಮವಾಗಿ ಜೀವನ ಸಾಗಿಸುತ್ತಿರುವುದು ವಿಶೇಷ. ಇಷ್ಟೆಲ್ಲಾ ಒತ್ತಡ ನಡುವೆಯೂ ಇಂತಹ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಕಿಮ್ಸ್ ವೈದ್ಯರಿಗೆ ಹ್ಯಾಟ್ಸಾಪ್ ಹೇಳಲೇಬೇಕು....
Kshetra Samachara
03/10/2021 12:25 pm