ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೋಷಕರೇ ಎಚ್ಚರ...! ನಿಮ್ಮ ಮಕ್ಕಳಿಗೆ ಕಾಡುತ್ತಿದೆ ಸಾಂಕ್ರಾಮಿಕ ರೋಗ ತಕ್ಷಣವೇ ಜಾಗರೂಕರಾಗಿರಿ...!

ಹುಬ್ಬಳ್ಳಿ: ಎಚ್ಚರ ಪೋಷಕರೇ ಎಚ್ಚರ..! ನಿಮ್ಮ ಮಕ್ಕಳನ್ನು ಕಾಡುತ್ತಿವೆ ಸಾಂಕ್ರಾಮಿಕ ರೋಗ. ಸ್ವಲ್ಪ ನಿಷ್ಕಾಳಜಿ ವಹಿಸಿದರೇ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇಷ್ಟು ದಿನ ಕೊರೋನಾದಿಂದ ಕಂಗೆಟ್ಟಿದ್ದ ಜನರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ಮಕ್ಕಳನ್ನು ಕಾಡುತ್ತಿದೆ ಸಾಂಕ್ರಾಮಿಕ ಜ್ವರ, ಆಸ್ಪತ್ರೆಗಳೆಲ್ಲ ಭರ್ತಿ, ಚಿಕಿತ್ಸೆಗಾಗಿ ಪೋಷಕರ ಪರದಾಟ. ಹೌದು.. ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿರುವ ಪೋಷಕರಿಗೆ ಈಗ ತಮ್ಮ ಮಕ್ಕಳಿಗೆ ಸಾಂಕ್ರಾಮಿಕ ರೋಗ ಕಾಡುತ್ತಿರುವುದು ಭಯವನ್ನು ಉಂಟುಮಾಡಿದೆ. 1 ರಿಂದ 8 ವರ್ಷದ ಮಕ್ಕಳಲ್ಲಿ ಸಮಸ್ಯೆ ಉಂಟಾಗಿದ್ದು, ಕಳೆದ ಕೆಲ ದಿನಗಳಿಂದ ಸಾಂಕ್ರಾಮಿಕ ಜ್ವರ ಹೆಚ್ಚಾಗುತ್ತಿದೆ ಇದರಿಂದ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿದ್ದು, ಪಾಲಕರು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಖಾಸಗಿ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆಗಾಗಿ ಪರದಾಡುತಿದ್ದು, ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾದು ಬೀರಲಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದರು. ಆದರೇ ಈಗ ನೂರಾರು ಮಕ್ಕಳು ಜ್ವರ, ನೆಗಡಿ, ಕಫ ಮತ್ತು ಡೆಂಗುವಿನಿಂದ ಬಳಲುತ್ತಿರುವುದರಿಂದ ಮೂರನೇ ಅಲೆ ಬಂದು ಬಿಟ್ಟಿತೇ ಎಂದು ಸಾರ್ವಜನಿಕರಲ್ಲಿ ಸಂದೇಹ ಮೂಡುವಂತಾಗಿದೆ.

ಇನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸೇರಿದಂತೆ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ಜ್ವರದ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಇದರಿಂದ ಬೆಡ್ ಮತ್ತು ಚಿಕ್ಕಮಕ್ಕಳ ವೈದ್ಯರ ಕೊರತೆ ಕಾಣುತ್ತಿದೆ. ಬ್ರಾಂಕಯೋಲೆಟೆಸ್ ಎಂಬ ಸಾಂಕ್ರಾಮಿಕ ಜ್ವರದಿಂದ ಪೋಷಕರು ಕಂಗಾಲಾಗಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಹ ಹೈರಾಣಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

09/09/2021 01:40 pm

Cinque Terre

44.28 K

Cinque Terre

9

ಸಂಬಂಧಿತ ಸುದ್ದಿ