ಹುಬ್ಬಳ್ಳಿ: ಗೌರಿ ಗಣೇಶ ಹಬ್ಬದ ಸಂಭ್ರಮ ನಗರದಾದ್ಯಂತ ಮನೆ ಮಾಡಿದೆ. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ಆದರೆ ಖರೀದಿ ಭರಾಟೆಯಲ್ಲಿ ಜನರು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದು ಕಂಡು ಬಂತು.
ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಜನ ಜಾತ್ರೆಯೇ ಸೇರಿತು. ಹಬ್ಬಕ್ಕಾಗಿ ಹೂ, ಹಣ್ಣು ಖರೀದಿಗೆ ಹಿಂಡುಗಟ್ಟಲೆ ಆಗಮಿಸಿದ್ದರು. ಕೋವಿಡ್ 3ನೇ ಅಲೆಯ ಭೀತಿಯ ನಡುವೆಯೇ ಜನರ ಖರೀದಿಯಲ್ಲಿ ಮಗ್ನನಾಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮಾರುಕಟ್ಟೆಗೆ ಜನರು ಆಗಮಿಸುತ್ತಿದ್ದಾರೆ.
Kshetra Samachara
09/09/2021 12:51 pm