ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರ್ಕೇಸ್ಟ್ರಾ ಕಲಾವಿದರಿಗೆ ಯಾಕಿಷ್ಟು ಕಷ್ಟ:ಸರ್ಕಾರಕ್ಕೆ ಕಾಣುತ್ತಿಲ್ಲವೇ ಕಣ್ಣೀರು...!

ಹುಬ್ಬಳ್ಳಿ: ಅವರೆಲ್ಲ ಮನದಲ್ಲಿ ಸಾಕಷ್ಟು ನೋವಿದ್ದರೂ ಜನರನ್ನು ರಂಜಿಸುವ ವೃತ್ತಿನಿರತ ಕಲಾವಿದರು. ಕಲೆಯನ್ನು ಜೀವನವನ್ನಾಗಿಸಿಕೊಂಡಿರುವ ಇವರು ನಿಜಕ್ಕೂ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಕಷ್ಟು ಯೋಜನೆ ಜಾರಿಗೊಳಿಸುವ ಸರ್ಕಾರಕ್ಕೆ ಮಾತ್ರ ಇವರ ನೋವು ಅರ್ಥವಾಗುತ್ತಿಲ್ಲ. ಹಾಗಿದ್ದರೇ ಯಾರು ಆ ಕಲಾವಿದರು ಅವರ ಕಷ್ಟ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ಕಳೆದ ವರ್ಷ ಕೋವಿಡ್‌ನಿಂದಾಗಿ ನಾಟಕ ಪ್ರದರ್ಶನಗಳು, ಸಭೆ ಸಮಾರಂಭ ನಡೆಯದೆ ಕಲಾವಿದರು, ಮಾಲೀಕರು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಕೋವಿಡ್‌ ಎರಡನೇ ಅಲೆ ಮತ್ತೆ ಕಲಾವಿದರ ಬದುಕನ್ನು ತಲ್ಲಣಗೊಳಿಸಿದೆ. ಹೌದು.. ಆರ್ಕೆಸ್ಟ್ರಾ ಕಲೆಯನ್ನು ನಂಬಿಕೊಂಡು ಬದುಕುವ ಕಲಾವಿದರ ಕಷ್ಟ ನಿಜಕ್ಕೂ ಹೇಳತೀರದಾಗಿದೆ. ಸಮಾರಂಭದಲ್ಲಿ ಪ್ರದರ್ಶನ ನೀಡುವ ಆರ್ಕೆಸ್ಟ್ರಾ ಕಲಾವಿದರಿಗೆ ಸರ್ಕಾರ ಇದುವರೆಗೂ ಅನುಮತಿ ನೀಡದೇ ಇರುವುದು ಗಾಯದ ಮೇಲೆ ಬರೆ ಏಳೆದಂತಾಗಿದೆ.

ಸುಮಾರು ಎರಡು ವರ್ಷಗಳ ಕಾಲ ದುಡಿಮೆ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ನಮಗೂ ಕುಟುಂಬವಿದೆ‌. ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಮಕ್ಕಳು ಮನೆಯನ್ನು ನಿರ್ವಹಣೆ ಮಾಡಲು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಆರ್ಕೆಸ್ಟ್ರಾ ಕಲಾವಿದರು.

ಒಟ್ಟಿನಲ್ಲಿ ಸರ್ಕಾರ ರಾಜಕೀಯ ಕಾರ್ಯಕ್ರಮ, ಚುನಾವಣೆ, ರಾಜಕೀಯ ನಾಯಕರ ಮಕ್ಕಳ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತದೆ. ಆದರೆ ನೊಂದವರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

07/09/2021 02:54 pm

Cinque Terre

61.77 K

Cinque Terre

5

ಸಂಬಂಧಿತ ಸುದ್ದಿ