ಹುಬ್ಬಳ್ಳಿ- ಸಧ್ಯ ಕೊರೊನಾ ಮೂರನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ, ಜನರು ಹೆಚ್ಚು ಭಯಬೀತರಾಗಿದ್ದಾರೆ. ಆದ ಕಾರಣ ಎಲ್ಲರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಜನದಟ್ಟನೆ ಪ್ರದೇಶವನ್ನು ಹೆಚ್ಚಾಗಿ ದೂರದಿಂದ ಇರಬೇಕೆಂದು ಪಾಲಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಇನ್ನೂ ಪ್ರಾರಂಭ ವಾಗದ ಹಿನ್ನೆಲೆಯಲ್ಲಿ, ಮಕ್ಕಳನ್ನು ಅನಾವಶ್ಯಕವಾಗಿ ಹೊರಗೆ ಬೀಡಬಾರದ, ಮಾಸ್ಕ್ ಇಲ್ಲದೆ ಯಾರು ಹೊರಗೆ ಬರಬಾರದು, ಪದೆ ಪದೆ ಕೈಗಳನ್ನು ತೊಳಿತಾ ಇರಬೇಕು. ಯಾರಿಗಾದರು ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಕೂಡಲೆ ಸ್ವಾಬ್ ಚೆಕ್ ಮಾಡಿಸಿ, ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು. ಹೆಚ್ಚಾಗಿ ಹಣ್ಣು ಪದಾರ್ಥ ಮತ್ತು ಪ್ರೊಟೀನ್ ಆಹಾರ ಸೇವಿಸಬೇಕೆಂದು ಸಲಹೆ ನೀಡಿದರು.
Kshetra Samachara
05/08/2021 06:40 pm