ಧಾರವಾಡ: 18 ರಿಂದ 44 ವಯೋಮಿತಿಯ ವಿಕಲಚೇತನರಿಗೆ ಕೋವಿಡ್ ಲಸಿಕಾಕರಣ

ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು “ಮಮತ” ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಧಾರವಾಡ ನಗರ ವ್ಯಾಪ್ತಿಯ 18 ರಿಂದ 44 ವಯೋಮಿತಿಯ ವಿಕಲಚೇತನರಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು.

ಅರ್ಹ ವಿಕಲಚೇತನರಿಗೆ ಜೂನ್ 14ರ ಸೋಮವಾರ, ಬೆಳಿಗ್ಗೆ 10.30 ಗಂಟೆಗೆ ಕೊಪ್ಪದಕೆರೆಯಲ್ಲಿರುವ “ಮಮತ” ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಾಲೆಯಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. 18 ರಿಂದ 44 ವಯೋಮಿತಿಯ ವಿಕಲಚೇತನರು ತಮ್ಮ ಅಂಗವಿಕಲತೆಯ ಗುರುತಿನ ಚೀಟಿ ಯು.ಡಿ.ಐ.ಡಿ ಕಾರ್ಡ್ ಹಾಗೂ ಆಧಾರ ಕಾರ್ಡಗಳನ್ನು ತೋರಿಸಿ ಹೆಸರು ನೋಂದಾಯಿಸಿ ಲಸಿಕೆಯ ಸೌಲಭ್ಯವನ್ನು ಪಡೆಯಬೇಕೆಂದು ಧಾರವಾಡ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kshetra Samachara

Kshetra Samachara

14 days ago

Cinque Terre

111.31 K

Cinque Terre

4

 • ramkrishna shindhe
  ramkrishna shindhe

  i98cokbov

 • Mithun Kabadi
  Mithun Kabadi

  Hubli not coming

 • Nagarik
  Nagarik

  Sir, Kashta agutta onde kade hogi hakisikollodu, yella lasike kendradalli avarige hakoke heli please..

 • deepa nayak
  deepa nayak

  good work hogari lasike hakori plz🙏