ಧಾರವಾಡ: ಡಯಾಬಿಟಿಸ್ ಅಂದಾಕ್ಷಣ ಎಲ್ಲರಲ್ಲಿಯೂ ಒಂದಿಲ್ಲೊಂದು ರೀತಿಯಲ್ಲಿ ಆತಂಕ ಸೃಷ್ಟಿಯಾಗುವುದು ಖಂಡಿತ. ಇಂತಹ ಆತಂಕವನ್ನು ದೂರಮಾಡಿ ನಿಮಗೆ ಆರೋಗ್ಯವನ್ನು ಒದಗಿಸಲು ಸಿದ್ಧವಾಗಿದೆ ಇಕೋ ಜೀವನ್. ಉತ್ತಮ ಆಹಾರದಿಂದ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ.ಉತ್ತಮ ಜೀವನಕ್ಕೆ ಉತ್ತಮ ಆಹಾರವೇ ಪೂರಕವಾಗಿದೆ ಎಂಬ ಸಂದೇಶವನ್ನು ಸಾರುವ ಮೂಲಕ ಐಐಟಿ ಪದವೀಧರನ ಕನಸಿನ ಸಂಸ್ಥೆಯೊಂದು ಪರಿಸರ ಸ್ನೇಹಿ ಹಾಗೂ ಆರೋಗ್ಯಯುಕ್ತ ಆಹಾರ ಉತ್ಪನ್ನಗಳನ್ನು ನೀಡಲು ಮುಂದಾಗಿದೆ.
ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ಇಕೋ ಜೀವನ್ ಸಂಸ್ಥೆಯು ಉತ್ಕೃಷ್ಟ ಮಟ್ಟದ ಆಹಾರವನ್ನು ನೀಡುವ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರವನ್ನು ಎಲ್ಲ ವರ್ಗದ ಜನರಿಗೆ ತಲುಪುವಂತೆ ಮಾಡಲು ಇಕೋ ಜೀವನ್ ಸಂಸ್ಥೆಯ ಧಾರವಾಡದಲ್ಲಿ ಪ್ರಾರಂಭಗೊಂಡಿದೆ.
ನಿಮ್ಮ ಆರೋಗ್ಯ ನಿಮ್ಮ ಆಹಾರದಲ್ಲಿದೇ ಎಂಬುವಂತ ಘೋಷ ವಾಕ್ಯದೊಂದಿಗೆ ತಲೆಯೆತ್ತಿರುವ ಇಕೋ ಜೀವನ್ ಗ್ರಾಹಕರಿಗೆ ಉತ್ತಮ ಆಹಾರ ಉತ್ಪನ್ನ ಒದಗಿಸಲು ಸನ್ನದ್ಧವಾಗಿದೆ. ಐಐಟಿ ಪದವೀಧರ ರವಿಚಂದ್ರ ಬಾನಾವತ್ ಸ್ಥಾಪನೆ ಮಾಡಿರುವ ಇಕೋ ಜೀವನ ಸಂಸ್ಥೆಯು ಪ್ರಸ್ತುತ ದಿನಮಾನಗಳಲ್ಲಿ ಆಹಾರದ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಡಯಾಬಿಟಿಸ್ ಅಂದರೆ ಇನಮೇಲೆ ಇಷ್ಟದ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೀರಾ ನಿಮ್ಮೆಲ್ಲ ಆಶಯಗಳಿಗೆ ಆರೋಗ್ಯಯುತ ಆಹಾರ ನೀಡಲು ಇಕೋ ಜೀವನ್ ಡಯಾಬಿಟಿಸ್ ಫುಡ್ ಕಿಟ್ ಈಗ ಲಭ್ಯವಿದೆ. ಹಾಗಿದ್ದರೇ ಈ ಬಗ್ಗೆ ರವಿಚಂದ್ರ ಅವರೇ ಹೇಳಿದ್ದಾರೆ ಕೇಳಿ..
ಇಕೋ ಜೀವನ್ 2019ರಲ್ಲಿ ಪ್ರಾರಂಭಗೊಂಡಿದ್ದು, ಮೇ. 2020ರಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಲಭ್ಯವಾಗಿಸಿದೆ. ಒಟ್ಟು 25ಕ್ಕೂ ಹೆಚ್ಚು ಉತ್ಪನ್ನಗಳನ್ನು ಈಗಾಗಲೇ ಪರಿಚಯಿಸಿದ್ದು,ಮಲ್ಟಿ ಮಿಲ್ಲೆಟ್ ದೋಸಾ, ಮಿಲ್ಲೆಟ್ ಕಿಚಡಿ, ಉಪ್ಮಾ, ರಾಗಿ ದೋಸಾ, ರಾಗಿ ಮಾಲ್ಟ್, ಖೀರ್ ಬಿಸಿ ಬೆಳೆ ಬಾಥ್ ಈಗ 200 ಗ್ರಾಂ ಹಾಗೂ 400 ಗ್ರಾಮಗಳಲ್ಲಿ ಕೂಡ ಲಭ್ಯವಿದೆ.ಅಲ್ಲದೇ ಮಧುಮೇಹಿಗಳಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ವಿಶೇಷ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಕೈಗೆಟುಕುವ ದರದಲ್ಲಿ ನಿಮ್ಮ ನಿಮ್ಮ ನಗರದಲ್ಲಿ ಹಾಗೂ ಆನ್ ಲೈನ್ ಮೂಲಕ ಕೂಡ ಲಭ್ಯವಾಗಲಿದೆ.
ಇನ್ನೂ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳ ಮೂಲಕ ತಯಾರಿಸಿ ಸಿದ್ಧ ಪಡಿಸುವ ಇಕೋ ಜೀವನ್ ಉತ್ಪನ್ನಗಳು ಗ್ರಾಹಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಕರ್ನಾಟಕ ಸರ್ಕಾರ ಕೊಡ ಮಾಡುವ ಎಲಿವೇಟ್ ಪುರಸ್ಕಾರವನ್ನು ಪಡೆದುಕೊಂಡಿದೆ. ಅಲ್ಲದೇ ಈಗಾಗಲೇ ಈ ಉತ್ಪನ್ನಗಳು ಆನ್ ಲೈನ್ ಮಾರ್ಕೆಟಿಂಗ್ ವಲಯಗಳಾದ ಅಮೇಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣದ ಮಾರುಕಟ್ಟೆಯಲ್ಲಿ ಲಭ್ಯವಿರುವುದು ವಿಶೇಷವಾಗಿದ್ದು,ಇಂತಹ ಗುಣಮಟ್ಟದ ಆಹಾರ ಉತ್ಪನ್ನಗಳು ಹು-ಧಾ ಅವಳಿನಗರದ ಜನತೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಇಕೋ ಜೀವನ್ ಫುಡ್ ಕಿಟ್ ತಯಾರಿಕೆಗೆ ಹೆಚ್ಚಿನ ಒತ್ತನ್ನು ನೀಡಿದೆ.
ಈಗಾಗಲೇ ಗ್ರಾಹಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಇಕೋ ಜೀವನ್ ಮಿಲೆಟ್ ಪ್ರೋಡೆಕ್ಟ್ ವಿಶ್ವದ ಏಳು ದೇಶದಲ್ಲಿ ಹೆಸರು ಮಾಡಿದ್ದು, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಕ್ಲೀನ್ & ಹೆಲ್ತ್ ಗೆ ಆದ್ಯತೆ ನೀಡುವ ಮೂಲಕ ಸಿರಿಧಾನ್ಯದ ಧಾರವಾಡ ಜಿಲ್ಲೆಯ ಪ್ರೋಡೆಕ್ಟ್ ಸಾಕಷ್ಟು ಹೆಸರು ಮಾಡಿದ್ದು, ಈ ಒಂದು ಹೆಮ್ಮೆಯ ಸಂಗತಿಯನ್ನು ರವಿಚಂದ್ರ ಅವರು ಹಂಚಿಕೊಡಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿರುವ ಇಕೋ ಜೀವನ್ ಆರೋಗ್ಯ ಪರಿಸರದಲ್ಲಿ ಸ್ವಚ್ಛಂದವಾಗಿ ತಲೆ ಎತ್ತಿದ್ದು, ಆಹಾರದ ಸ್ವಾದವನ್ನು ಮತ್ತಷ್ಟು ಹೆಚ್ಚಿಸಿ ಟ್ಯಾಬ್ಲೆಟ್ ನಲ್ಲಿಯೇ ಜೀವನ ಎಂದುಕೊಂಡಿದ್ದವರಿಗೆ ಈಗ ಹೊಸ ಜೀವನ ನೀಡಲು ಇಕೋ ಜೀವನ್ ಮುಂದಾಗಿದೆ. ಹಾಗಿದ್ದರೇ ತಡ ಯಾಕೆ ಇಂದೇ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ 8296557420,8310269930
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2022 06:10 pm