ಮನೆಯಲ್ಲಿ ಕುಟ್ಟುವ, ಬೀಸುವ ಹಾಗೂ ರುಬ್ಬುವ ಕೆಲಸಗಳು ಮಾಯವಾಗಿ ಎಷ್ಟೋ ವರ್ಷಗಳಾಗಿವೆ. ಅದಕ್ಕಾಗಿ ಮಿಕ್ಸಿ ಗ್ರೈಂಡರ್ ಬಂದಿವೆ. ಈಗಂತೂ ಚಪಾತಿ ಹಿಟ್ಟು ನಾದುವ, ತರಕಾರಿ ಕಟ್ ಮಾಡುವ, ಕಸ ಹೊಡೆಯುವ ಉಪಕರಣಗಳು ಬಂದಿವೆ.
ಅದೇ ರೀತಿ ಪುರಷರು ನಿರಂತರವಾಗಿ ಕುಳಿತು ಕೆಲಸ ಮಾಡುವುದು, ಅತಿಯಾದ ವಾಹನ ಬಳಕೆಯಿಂದ ನಡಿಗೆ ಇಲ್ಲದಿರುವದರ ಪರಿಣಾಮ ಮಾತ್ರ ಭಯಂಕರ.
ದೈಹಿಕ ಚಟುವಟಿಕೆಗಳಿಲ್ಲದ ಕಾರಣ ಬೊಜ್ಜು ಮಧುಮೇಹದಂತ ರೋಗಗಳಿಗೆ ಮಹಿಳೆಯರು ಹಾಗೂ ಪುರುಷರು ತುತ್ತಾಬೇಕಾಗಿದೆ. ಇನ್ನು ಇವುಗಳ ಪರಿಹಾರಕ್ಕಾಗಿ ನಿತ್ಯ ಹತ್ತಾರು ಮಾತ್ರೆ ನುಂಗುವುದು ಅನಿವಾರ್ಯ.
ದೈಹಿಕ ಚಟುವಟಿಕೆಗಳಿಲ್ಲದೆ ಅತಿಯಾದ ಮಾತ್ರೆಗಳ ಸೇವನೆಯಿಂದ ಆಗುವ ದುಷ್ಟಪರಿಣಾಮ ಗೊತ್ತೆ?
ಮಧುಮೇಹದಿಂದ ಕಿಡ್ನಿ, ಲಿವರ್, ಹಾರ್ಟ್ ಹಾಗೂ ಬ್ರೇನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇವುಗಳ ನಿಷ್ಕ್ರಿಯತೆ ಅಥವಾ ವೈಫಲ್ಯ. ಇಷ್ಟು ಮಾತ್ರವಲ್ಲ ಮಧುಮೇಹದಿಂದ ಚರ್ಮ ಉದುರುವಿಕೆ, ಅಜೀರ್ಣ ,ಅತಿಯಾದ ಬೇಧಿ ಆಂತರಿಕ ಸ್ರಾವ, ದೇಹದಲ್ಲಿ ಅಲ್ಲಲ್ಲಿ ಗಡ್ಡೆಗಳಗಾವುದು, ಮಲಬದ್ಧತೆ, ವಾತ ಪಿತ್ತ, ಉದರರೋಗ, ಕಣ್ಣು, ಕಿವಿ ಹಾಗೂ ಮೂಗಿನ ರೋಗ, ಜ್ವರ, ಅತಿಯಾದ ಬಾಯಾರಿಕೆ, ಚರ್ಮರೋಗ, ಧಾತು ಕ್ಷೀಣ, ನಿದ್ರಾ ಹೀನತೆ, ಬಾರಿ ಬಾರಿ ಮೂತ್ರ ವಿಸರ್ಜನೆ ಹಾಗೂ ಭಮೆಗೊಳ್ಳುವುದು ಸೇರಿದಂತೆ ಅನೇಕ ಕಾಯಿಲೆಗಳು ಕಾಡುವವು.
ಹಾಗಾದರೆ ಇವುಗಳಿಗೆ ಪರಿಹಾರವೇನು ಎಂದು ಕೇಳುವಿರಾ? ಆಯುರ್ವೇದದಲ್ಲಿ ಬರುವ ಅಮೃತತುಲ್ಯ ರಸಾಯನವೆಂಬ ಸಂಜೀವಿನಿ ಸೇವನೆ ಹಾಗೂ ಸರಳ ಸುಖಾಸನ ಯೋಗಾಗಸನ. ಬೆಳಗ್ಗೆ ವಾಕಿಂಗ್ ಮಾಡಲು ಸಾಧ್ಯವಾಗದ, ಎಲ್ಲ ವಯೋಮಾನದವರು ಈ ಸರಳ ಯೋಗಾಸನ ಮಾಡಬಹುದು ಎಂದು ಹೇಳುತ್ತಾರೆ ಖ್ಯಾತ ಆಯುರ್ವೇದ ವೈದ್ಯ ಯೋಗೇಂದ್ರ ಶಿಂದೇಜಿ.
ಭುಜದ ನೋವು (ಫ್ರೋಜನ್ ಶೋಲ್ಡರ್ ) ಅಥವಾ ಸಮಸ್ಯೆಗಳಿಗೆ ಲೋಡು ತಿರುಗಿಸುವುದು, ಬೆನ್ನು ಹುರಿ ಸರಳಗೊಳಿಸುವುದು,ನಿದ್ರಾಹೀನತೆ ದೂರ, ಪಚನ ಸಮಸ್ಯೆ ನಿವಾರಣೆ ಹಾಗೂ ಸರಳ ಧ್ಯಾನಕ್ಕಾಗಿ ಇಗೋ ಇಲ್ಲಿವೆ ಆ ವಿಡಿಯೋಗಳು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/01/2022 11:52 am