ಹುಬ್ಬಳ್ಳಿ: ಮೊದಲ ಹಾಗೂ ಎರಡನೇ ಅಲೆ ಮುಗಿದು ಮೂರನೇ ಅಲೆಯ ಆತಂಕ ಜೋರಾಗಿದೆ. ಸರ್ಕಾರ ರೋಗ ನಿಯಂತ್ರಣಕ್ಕೆ ಎಲ್ಲೆಡೆಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂಗಳಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ. ಹಾಗಿದ್ದರೇ ಇಲ್ಲಿ ಆತಂಕ ಸೃಷ್ಟಿಸಿದ್ದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಹೀಗೆ ಹಣವನ್ನು ಡ್ರಾ ಮಾಡಲು ಬರುತ್ತಿರುವ ಜನರು. ಯಾವುದೇ ಸ್ಯಾನಿಟೈಸರ್ ವ್ಯವಸ್ಥೆ ಇಲ್ಲದಿರುವ ಎಟಿಎಂ ಗಳು. ಈ ಎಲ್ಲದಕ್ಕೂ ಸಾಕ್ಷಿಯಾಗಿರುವುದೇ ವಾಣಿಜ್ಯನಗರಿ ಹುಬ್ಬಳ್ಳಿ. ಹೌದು.. ಸರ್ಕಾರ ಹಾಗೂ ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಕಿಲ್ಲರ್ ಕೊರೋನಾ ಓಮೈಕ್ರಾನ್ ಕಟ್ಟಿ ಹಾಕಲು ಚಿಂತನೆ ನಡೆಸಿದೆ. ಆದರೆ ಎಟಿಎಂಗಳಿಗೆ ದಿನಕ್ಕೆ ಲಕ್ಷಾಂತರ ಜನರು ಹಣ ಜಮಾ ಮಾಡಲು ಡ್ರಾ ಮಾಡಲು ಎಟಿಎಂಗೆ ಬರುತ್ತಾರೆ. ಆದರೆ ಎಟಿಎಂಗಳಲ್ಲಿ ಮಾತ್ರ ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಮುಟ್ಟಿದ ಮಷಿನ್ ಅನ್ನು ಮತ್ತೊಬ್ಬರು ಮುಟ್ಟಿ ವ್ಯವಹಾರ ಮಾಡಬೇಕಿದೆ. ಅಲ್ಲದೆ ಒಬ್ಬ ಗ್ರಾಹಕರ ನಂತರ ಸ್ಯಾನಿಟೈಸರ್ ಮಾಡಬೇಕಾದ ಬ್ಯಾಂಕ್ ಸಿಬ್ಬಂದಿ ಯಾವುದೇ ರೀತಿಯ ಕಾಳಜಿ ವಹಿಸದೇ ಇರುವುದರಿಂದ ರೋಗ ಹರಡುವ ಭೀತಿಯಲ್ಲಿ ಎಟಿಎಂ ಗಳಿವೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಾತ್ರವಲ್ಲದೆ ಧಾರವಾಡ ಜಿಲ್ಲೆಯಾದ್ಯಂತ ನೂರಾರು ಎಟಿಎಂ ಗಳಿದ್ದರೂ ಎಲ್ಲಿಯೂ ಕೂಡ ಕೋವಿಡ್ ನಿಯಮ ಮಾತ್ರ ಪಾಲನೆಯಾಗುತ್ತಿಲ್ಲ. ಅಲ್ಲದೇ ಎಲ್ಲ ಕಡೆಯೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಲಾಗುತ್ತದೆ. ಆದರೆ ಎಟಿಎಂಗಳಲ್ಲಿ ಮಾತ್ರ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಎಟಿಎಂಗಳಲ್ಲಿ ಸಾಮಾನ್ಯವಾಗಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದರೂ ಜಿಲ್ಲಾಡಳಿತ ಹಾಗೂ ಬ್ಯಾಂಕ್ ಆಡಳಿತ ಮಂಡಳಿ ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಎಷ್ಟೇ ಸುಧಾರಣೆ ತಂದರೂ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ಹಾಗೂ ಜಿಲ್ಲಾಡಳಿತದ ಅವ್ಯವಸ್ಥೆ ಗೋಚರಿಸುತ್ತಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೇತ್ತುಕೊಂಡು ರೋಗ ಹರಡುವ ಎಟಿಎಂಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
Kshetra Samachara
12/01/2022 02:18 pm